
Udupi: ಸ್ವಾತಂತ್ರ್ಯ ದಿನಾಚರಣೆ; ಬೃಹತ್ ತ್ರಿವರ್ಣ ಧ್ವಜ ಪ್ರದರ್ಶನ
15/08/2025
ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಆಯೋಜನೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಉಡುಪಿ ನಗರದ ಮಾರುಥಿ ವೀಥಿಕಾದಲ್ಲಿ ನಡೆಯಿತು.
ಈ ವೇಳೆ 20×14 ಅಡಿ ಸುತ್ತಳತೆಯ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಲಾಯಿತು.
ಧ್ವಜ ಪ್ರದರ್ಶನಕ್ಕೆ ಹಿರಿಯ ಸಿವಿಲ್ ನ್ಯಾಯಾದೀಶ, ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕೋಟಕ್ ಮಹಿಂದ್ರಾ ಬ್ಯಾಂಕಿನ ಮ್ಯಾನೇಜರ್ ವಿವೇಕ್ ಹೆಗ್ಡೆ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಿತಾ ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಈ ವೇಳೆ ಪಾಕತಜ್ಞ ಶ್ರೀಧರ ಭಟ್ ಉಪಾಹಾರವನ್ನು ಉಚಿತವಾಗಿ ವಿತರಿಸಿದರು.