.jpeg)
Navunda: ಕೋಯಾ ನಗರ ಸರಕಾರಿ ಶಾಲೆಯಲ್ಲಿ ಸ್ವಾತಂತ್ರ‍್ಯೋತ್ಸವ
15/08/2025
ನಾವುಂದ ಕೋಯಾ ನಗರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮ ನಡೆಯಿತು.
ಶಾಲೆಯನ್ನು ದತ್ತು ಸ್ವೀಕಾರ ಮಾಡಿದ ಉದ್ಯಮಿ ಜಗದೀಶ್ ಶೆಟ್ಟಿ ಕುದ್ರಕೋಡು ಧ್ವಜಾರೋಹಣ ನೇರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲಿಯಾಸ್, ಲಯನ್ಸ್ ಕ್ಲಬ್ ನಾವುಂದದ ಅಧ್ಯಕ್ಷ ನಿತ್ಯಾನಂದ ಆಚಾರ್ಯ, ಕಾರ್ಯದರ್ಶಿ ಪ್ರಮೋದ್ ಪೂಜಾರಿ, ಖಜಾಂಚಿ ವಿಜೇತ, ದಾನಿಗಳಾದ ಅಫ್ತಾಬ್, ಶಾಲಾ ಎಸ್.ಡಿ.ಎಂ.ಸಿ. ಸದಸ್ಯರುಗಳು, ಹಳೆವಿದ್ಯಾರ್ಥಿ ಸಂಘದ ಸದಸ್ಯರುಗಳು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಾನಿಗಳಾದ ಅಫ್ತಾಬ್ ಅವರು ವಿದ್ಯಾರ್ಥಿಗಳಿಗೆ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.
ಲಯನ್ಸ್ ಕ್ಲಬ್ ನಾವುಂದ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತಿತರ ಪರಿಕರಗಳನ್ನು ಖಜಾಂಚಿ ವಿಜೇತ ಅವರು ವಿತರಿಸಿದರು.