
Belthangady: 2012ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಬಾಲಕಿ ನಾಪತ್ತೆ; ಎಸ್‌ಐಟಿಗೆ ಸಹೋದರ ದೂರು
15/08/2025
2012ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಈ ಬಗ್ಗೆ ಆಕೆಯ ಸಹೋದರರು ಎಸ್‌ಐಟಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವವರ ಬಗ್ಗೆ ದೂರು ನೀಡುವಂತೆ ಸೂಚಿಸಿದ್ದರು. ಅದರಂತೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ ಕಾವಳಮೂಡೂರು ಗ್ರಾಮದ ನಿತಿನ್ ದೇವಾಡಿಗ ಅವರು ದೂರು ನೀಡಿದ್ದಾರೆ. ಕಾವಳ ಮೂಡೂರು ಗ್ರಾಮದ 17 ವರ್ಷದ ಹೇಮಾವತಿ ಎಂಬಾಕೆ ಮನೆ ಸಮೀಪದ ಮಹಿಳೆಯೊಬ್ಬರ ಜೊತೆ ಧರ್ಮಸ್ಥಳಕ್ಕೆ ತೆರಳಿದ್ದರು. ಆದರೆ ಬಳಿಕ ಮನೆಗೆ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಹಂಚಿಕೊಳ್ಳುವ0ತೆ ಎಸ್‌ಐಟಿಯವರು ಪ್ರಕಟಣೆ ನೀಡಿರುವುದರಿಂದ ದೂರು ನೀಡಲು ಆಗಮಿಸಿರುವುದಾಗಿ ಹೇಮಾವತಿ ಅವರ ಸಹೋದರ ನಿತಿನ್ ದೇವಾಡಿಗ ತಿಳಿಸಿದ್ದಾರೆ. ಪುಂಜಾಲಕಟ್ಟೆ ಠಾಣೆಗೂ ದೂರು ನೀಡಲಾಗಿದೆ.