
Mudbidre: ಖಾಸಗಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ; ಆರೋಪಿ ವೃದ್ಧನ ಬಂಧನ
15/08/2025
ಮೂಡಬಿದ್ರೆಯಲ್ಲಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿದ ವೃದ್ಧನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಕಳ ಆನೆಕೆರೆಯ ತರಕಾರಿ ಅಂಗಡಿ ಕಾರ್ಮಿಕ, ಬೆಳುವಾಯಿ ಕರಿಯನಂಗಡಿ ಕುಕ್ಕುಡೇಲು ನಿವಾಸಿ ರೆಹ್ಮಾನ(60) ಬಂಧಿತ ಆರೋಪಿ. ಖಾಸಗಿ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಂತೆ ಮೂಡಬಿದ್ರೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.