
Udupi: ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ (Video)
16/08/2025
ಉಡುಪಿಯ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಗಳೂರಿನ ಕಸ್ಟಮರ್ ಎಕ್ಸ್.ಪಿ. ಕಂಪೆನಿಯ ಸೊಲ್ಯೂಷನಿಂಗ್ ಕನ್ಸಲ್ಟೆಂಟ್ ವಿಭಾಗದ ನಿರ್ದೇಶಕಿ ನೀತಾ ಹರೀಶ್ ಕಿಣಿ ಧ್ವಜಾರೋಹಣ ನೆರವೇರಿಸಿದರು.
ಶಾಲಾ ಆಡಳಿತ ಮಂಡಳಿ ಅಲೆವೂರು ಗ್ರೂಪ್ ಫೊರ್ ಎಜುಕೇಶನ್ ನಿರ್ದೇಶಕ ಸುನೀಲ್ ಆರ್. ಶೆಣೈ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ. ಕಿಣಿ, ಸಹಾಯಕ ಮುಖ್ಯೋಪಾಧ್ಯಾಯಿನಿ ಸುಮನಾ ಬಿ.ಆರ್. ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.