
Bangalore: ನಿರ್ಮಾಪಕನಿಗೆ 3 ಕೋಟಿ ವಂಚನೆ; ನಟ ಧ್ರುವ ಸರ್ಜಾ ವಿರುದ್ಧ ದೂರು
09/08/2025
ನಟ ಧ್ರುವ ಸರ್ಜಾ ವಿರುದ್ಧ 3 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಜಗ್ಗುದಾದಾ ಚಿತ್ರದ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಅವರು ಮುಂಬೈನ ಅಂಬೋಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2019ರಲ್ಲಿ ಚಿತ್ರ ನಿರ್ಮಾಣಕ್ಕಾಗಿ ಧ್ರುವ ಸರ್ಜಾ ಅವರಿಗೆ 3 ಕೋಟಿ ರೂಪಾಯಿ ಹಣ ನೀಡಲಾಗಿದೆ. ಆದರೆ ಧ್ರುವ ಸರ್ಜಾ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಹಣವನ್ನೂ ಮರು ಪಾವತಿ ಮಾಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.