
Bihar: ಆ. 17ರಿಂದ 15 ದಿನಗಳ ಕಾಲ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ ಅಧಿಕಾರ ಯಾತ್ರೆ
16/08/2025
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಮೂಲಕ ಮತದಾನದ ಹಕ್ಕಿನ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಆಗಸ್ಟ್ 17ರಿಂದ ಮತ ಅಧಿಕಾರ ಯಾತ್ರೆ ನಡೆಸಲಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಎರಡು ವಾರಗಳ ಕಾಲ ಬಿಹಾರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಯಾತ್ರೆಯ ಅಂತಿಮ ಸಮಾವೇಶ ಪಾಟ್ನಾದಲ್ಲಿ ನಡೆಯಲಿದೆ. ಸಸರಾಂ ನಿಂದ ರಾಹುಲ್ ಗಾಂಧಿ ಯಾತ್ರೆ ಆರಂಭಿಸಲಿದ್ದಾರೆ. ರಾಜ್ಯದ 25 ಜಿಲ್ಲೆಗಳ ಮೂಲಕ 15 ದಿನಗಳ ಕಾಲ ಯಾತ್ರೆ ಸಾಗಲಿದೆ. ಆಗಸ್ಟ್ 20, 25 ಮತ್ತು 31ರಂದು ಯಾತ್ರೆಗೆ ವಿರಾಮ ನೀಡಲಾಗಿದೆ ಎಂದು ತಿಳಿದು ಬಂದಿದೆ.