
Dharmasthala: ಸರಣಿ ಶವ ಹೂತ ಪ್ರಕರಣ; ಜಿಪಿಆರ್ ಬಳಸಿ ಕಾರ್ಯಾಚರಣೆ
12/08/2025
ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡದ ಶೋಧ ಕಾರ್ಯ ಮೂರನೇ ವಾರಕ್ಕೆ ಕಾಲಿಟ್ಟಿದೆ.
ಆಗಸ್ಟ್ 12ರಿಂದ ಜಿಪಿಆರ್ ಯಂತ್ರವನ್ನು ಬಳಸಿ ಶವಗಳನ್ನು ಹೂತಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಎಸ್‌ಐಟಿ ಕಚೇರಿಗೆ ಬಂದಿರುವ ದೂರುದಾರ ಹಾಗೂ ಅಧಿಕಾರಿಗಳು ನೇತ್ರಾವತಿ ಸ್ನಾನ ಘಟ್ಟದತ್ತ ತೆರಳಿದ್ದಾರೆ. ಜಿಪಿಆರ್ ಯಂತ್ರವನ್ನು ನೇತ್ರಾವತಿ ಸ್ನಾನ ಘಟ್ಟದ ಸಮೀಪ ದೂರುದಾರ ಗುರುತಿಸಿದ 13ನೇ ಸ್ಥಳಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.