
Manipal: ಅತೀವೇಗದಿಂದ ಕಾರು ಚಾಲನೆ; ಆರೋಪಿ, ಕಾರು ಪೊಲೀಸ್ ವಶ
12/08/2025
ಮಣಿಪಾಲದ ಎಂಐಟಿ ಬಳಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸುತ್ತಿದ್ದ ಯುವಕನೊಬ್ಬನನ್ನು ಕಾರು ಸಮೇತ ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಕಣ್ಣೂರು ಮೂಲದ ಶೋಹೈಲ್ ನೀಲಾಕತ್(26) ಬಂಧಿತ ಆರೋಪಿ. ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅತೀ ವೇಗದಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಶೋಹೈಲ್‌ನನ್ನು ಹಿಂಬಾಲಿಸಿ ತೆರಳಿದ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ನೀಲಿ ಬಣ್ಣದ ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಲಾಗಿದ್ದು, ಅತೀ ವೇಗದಿಂದ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿರುವುದಕ್ಕಾಗಿ ಆರೋಪಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.