.jpg)
Kallianpura: ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮೀ ಪೂಜೆ
11/08/2025
ಉಡುಪಿಯ ಸಂತೆಕಟ್ಟೆ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆಯ ವತಿಯಿಂದ ವರಮಹಾಲಕ್ಷ್ಮಿ ಪೂಜೆ ನೆರವೇರಿಸಲಾಯಿತು.
ಸಂತೋಷ್ ಬಾಯರಿ ಮತ್ತು ರಾಘವೇಂದ್ರ ಭಟ್ ಪೌರೋಹಿತ್ಯ ವಹಿಸಿದ್ದರು. ಶ್ರೀ ವೀರಭದ್ರನ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ನಡೆಸುವ ಮೂಲಕ ವರಮಹಾಲಕ್ಷ್ಮಿ ಪೂಜೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ದಕ್ಕೂ ಮಹಿಳಾ ವೇದಿಕೆಯ ಸದಸ್ಯರಿಂದ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಮೊಕ್ತೇಸರ ಕೆ ಜ್ಯೋತಿಪ್ರಸಾದ ಶೆಟ್ಟಿಗಾರ್, ಆಡಳಿತ ಮಂಡಳಿ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವಿತರಣೆಯ ನಂತರ, ಹೇಮಾಕ್ಷಿ ಪ್ರಭಾಕರ ಶೆಟ್ಟಿಗಾರ ಚಿಟ್ಪಾಡಿ ಇವರ ವತಿಯಿಂದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.