
New Delhi: ಆ. 5ರಿಂದ ಟೋಲ್‌ಗಳಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಜಾರಿ
11/08/2025
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೆದ್ದಾರಿ ಪ್ರಯಾಣಕ್ಕಾಗಿ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪರಿಚಯಿಸಿದ್ದು, ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಆಗಾಗ್ಗೆ ಪ್ರಯಾಣಿಸುವವರಿಗೆ ಈ ವಾರ್ಷಿಕ ಪಾಸ್ ಅನುಕೂಲಕರವಾಗಿದೆ.
3,000 ರೂ. ಪಾವತಿಸಿ ದೇಶದ ಯಾವುದೇ ಟೋಲ್‌ಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್‌ಗೆ ಅನುಮತಿಸುವ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಆ.15ರಿಂದ ಲಭಿಸಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಫಾಸ್ಟ್ಯಾಗ್‌ಗಳಿಗಾಗಿ ಹೊಸ ವಾರ್ಷಿಕ ಪಾಸ್ ಅನ್ನು ಜೂನ್ ತಿಂಗಳಲ್ಲಿ ಘೋಷಿಸಿತ್ತು.
ಪಾಸ್‌ಗಳ ವಿತರಣಾ ಕಾರ್ಯಕ್ಕೆ ಆ.15ರಂದು ಚಾಲನೆ ಸಿಗಲಿದೆ. ಈ ಪಾಸ್ ಇದ್ದವರು, ಖಾಸಗಿ ಕಾರು, ಜೀಪ್,ವ್ಯಾನ್‌ಗಳನ್ನು ಗೊತ್ತುಪಡಿಸಿದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಮೋಟಾರುಮಾರ್ಗ ಶುಲ್ಕ ಪ್ಲಾಜಾಗಳಲ್ಲಿ ಒಂದು ವರ್ಷ ಅಥವಾ 200 ಟ್ರಿಪ್ ಹೋಗಬಹುದು. ಪ್ರತಿ ಬಾರಿ ಟೋಲ್ ಶುಲ್ಕ ಕೊಡುವುದು ತಪ್ಪುತ್ತದೆ. ವಾರ್ಷಿಕ ಪಾಸ್ ಆ.15 ರಿಂದ ಜಾರಿಗೆ ಬರಲಿದ್ದು, ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ, ದಟ್ಟಣೆ ಮತ್ತು ಸಂಘರ್ಷಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ.
ಬಳಕೆದಾರರು ತಮ್ಮ ಫಾಸ್ಟ್ಯಾಗ್ಗಳನ್ನು 3,000 ರೂ.ಗಳಿಗೆ ನವೀಕರಿಸುವ ಮೂಲಕ ಮಾನ್ಯತೆಯ ಅವಧಿ ಮುಗಿಯುವವರೆಗೆ ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬಹುದು. ಈ ಪಾಸ್‌ಗಳ ಮಾನ್ಯತೆಯ ಅವಧಿ ಮುಗಿದಾಗ, ಬಳಕೆದಾರರು ಪ್ರಸ್ತುತ ಫಾಸ್ಟ್ಯಾಗ್ ವ್ಯವಸ್ಥೆಯಂತೆ ಅವುಗಳನ್ನು ರೀಚಾರ್ಜ್ ಮಾಡಬಹುದು. ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಮೋಟಾರ್ ವೇ ಶುಲ್ಕ ಪ್ಲಾಜಾಗಳಲ್ಲಿ ಮಾತ್ರ ಪ್ರವೇಶಿಸಬಹುದು. ಮೋಟಾರು ಮಾರ್ಗಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ ಅಧಿಕಾರಿಗಳು ನಿಯಂತ್ರಿಸುವ ಇತರ ಸ್ಥಳಗಳು ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿನ ಶುಲ್ಕ ಪ್ಲಾಜಾಗಳಲ್ಲಿ ಇದು ಸಾಮಾನ್ಯ ಫಾಸ್ಟ್ಯಾಗ್‌ನಂತೆ ಕಾರ್ಯನಿರ್ವಹಿಸುತ್ತದೆ.