.jpg)
Kallianpura: ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ
11/08/2025
ಸಂತೆಕಟ್ಟೆ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಆದಿಶಕ್ತಿ ಮಹಿಳಾ ವೇದಿಕೆಯ ವತಿಯಿಂದ ಮೂರನೇ ವರ್ಷದ "ಆಟಿಡೊಂಜಿ ದಿನ " ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಈ ಹಿಂದೆ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸುತ್ತಿದ್ದ ಖಾದ್ಯಗಳನ್ನು ಮಹಿಳಾ ವೇದಿಕೆಯ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿ ತಂದು, ದೇವಸ್ಥಾನದಲ್ಲಿ ಸಾಮೂಹಿಕವಾಗಿ ಸೇವಿಸಿ ಸಂಭ್ರಮಿಸಿದರು. ಮಹಿಳಾ ವೇದಿಕೆಯ ಸದಸ್ಯರು ಸುಮಾರು 32 ಬಗೆಯ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿದ್ದರು.
ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜಾ ವಿಠಲ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ. ಅಶೋಕ್ ಶೆಟ್ಟಿಗಾರ್ ಅಂಬಲಪಾಡಿ, ಉಪಾಧ್ಯಕ್ಷ ಬೂದ ಶೆಟ್ಟಿಗಾರ್ ಪರ್ಕಳ ಮೊದಲಾದವರು ಇದ್ದರು,