
Puttur: ಪ್ರೀತಿಸಿ ವಂಚಿಸಿದ ಪ್ರಕರಣ; ಸಂತ್ರಸ್ತೆಯಿಂದ ರಕ್ಷಣೆ ಕೋರಿ ಐಜಿಪಿಗೆ ಮನವಿ
11/08/2025
ಬಿಜೆಪಿ ಮುಖಂಡ ಜಗನ್ನೀವಾಸ್ ರಾವ್ ಪುತ್ರ ಶ್ರೀಕೃಷ್ಣ ಜೆ ರಾವ್‌ನಿಂದ ವಂಚನೆಗೊಳಗಾಗಿರುವ ವಿದ್ಯಾರ್ಥಿನಿಯು ತನಗೆ ಜೀವಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ತನಗೆ ಪೊಲೀಸ್ ರಕ್ಷಣೆ ನೀಡುವಂತೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರಿಗೆ ವಿದ್ಯಾರ್ಥಿನಿ ಮನವಿ ಸಲ್ಲಿಸಿದ್ದಾರೆ. ಆಗಸ್ಟ್ 11ರಂದು ಮಂಗಳೂರಿನಲ್ಲಿರುವ ಐಜಿಪಿ ಕಚೇರಿಗೆ ಬಂದ ಸಂತ್ರಸ್ತೆ ಮನವಿ ಸಲ್ಲಿಸಿದ್ದಾರೆ. ರಾತ್ರಿ ವೇಳೆ ತಮ್ಮ ಮನೆಯ ಸುತ್ತ ಅಪರಿಚರು ಓಡಾಡುತ್ತಿದ್ದು, ಯಾರಿಂದಲಾದರೂ ಅಪಾಯವಾಗುವ ಸಂಭವವಿದೆ. ಹಾಗಾಗಿ ತಮಗ ರಕ್ಷಣೆ ನೀಡಬೇಕೆಂದು ವಿದ್ಯಾರ್ಥಿನಿ ಮನವಿ ಮಾಡಿಕೊಂಡಿದ್ದಾರೆ.