
Mysore: ಸೇತುವೆ ಕುಸಿದು ನಾಲೆಗೆ ಬಿದ್ದ ಲಾರಿ; ಚಾಲಕ ಪ್ರಾಣಾಪಾಯದಿಂದ ಪಾರು
05/08/2025
ಸೇತುವೆ ಮುರಿದು ಬಿದ್ದು ಭತ್ತ ಸಾಗಿಸುತ್ತಿದ್ದ ಲಾರಿಯೊಂದು ನಾಲೆಗೆ ಬಿದ್ದ ಘಟನೆ ಮೈಸೂರಿನ ಸರಗೂರು ತಾಲೂಕಿನ ಹಾಲುಗಡ ಗಣೇಶನ ಗುಡಿ ಬಳಿ ನಡೆದಿದೆ.
ಇಟ್ನ ಗ್ರಾಮದಿಂದ ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಸರಗೂರು ತಾಲೂಕಿನ ಹಾಲುಗಡ ಬಳಿ ಸೇತುವೆಯಲ್ಲಿ ಸಂಚರಿಸುವ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾಸ್ಥಳಕ್ಕೆ ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರರು ಹಾಗೂ ಸರಗೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕದೇವಮ್ಮನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಶಿಥಿಲಾವಸ್ಥೆಯಲ್ಲಿತ್ತು. ಹೀಗಾಗಿ ಘನ ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೂ ಬ್ಯಾರಿಕೇಡ್‌ಗಳನ್ನು ಹಿಂದೆ ಸರಿಸಿ, ವಾಹನ ಸಂಚರಿಸುತ್ತಿದೆ. ಹೀಗಾಗಿ ಅವಘಡ ಸಂಭವಿಸಿದೆ ಎಂದು ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರರಾದ ಉಷಾ ಹೇಳಿದ್ದಾರೆ.