Udupi: ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್; ಡಾ.ಸತೀಶ್ ಖಾರ್ವಿಗೆ 1 ಚಿನ್ನ 2 ಬೆಳ್ಳಿ ಪದಕ (Video)

Udupi: ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್; ಡಾ.ಸತೀಶ್ ಖಾರ್ವಿಗೆ 1 ಚಿನ್ನ 2 ಬೆಳ್ಳಿ ಪದಕ (Video)


ಆಗಸ್ಟ್ 2 ರಿಂದ 7 ರವರೆಗೆ ಕೋಝಿಕ್ಕೋಡ್‌ನ ಕೇರಳ ವಿ.ಕೆ. ಕೃಷ್ಣ ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಡಾ.ಸತೀಶ್ ಖಾರ್ವಿ ಅವರು 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ 1 ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. 


ಅಲ್ಲದೇ ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಭಾರವನ್ನು ಎತ್ತಿ 5ನೇ ರಾಷ್ಟ್ರೀಯ ನೂತನ ದಾಖಲೆ ಸ್ಥಾಪಿಸಿದ್ದಾರೆ. ಇವರು 2019 ರಲ್ಲಿ 210 ಕೆಜಿ ಭಾರವನ್ನೆತ್ತಿ ದಾಖಲೆ, 2021 ನೇ ವರ್ಷದಲ್ಲಿ 217.5 ಕೆ.ಜೆ, 2022 ನೇ ವರ್ಷದಲ್ಲಿ 220 ಕೆ.ಜಿ ಭಾರ, 2023 ನೇ ವರ್ಷದಲ್ಲಿ 221 ಕೆಜಿ ಭಾರ, 2025 ನೇ ವರ್ಷದಲ್ಲಿ 222.5 ಕೆ.ಜಿ  ಭಾರವನೆತ್ತಿ ನೂತನ ದಾಖಲೆ ಮಾಡಿದ್ದಾರೆ.




Ads on article

Advertise in articles 1

advertising articles 2

Advertise under the article