
Mysore: ದಸರಾ ಆನೆಗಳ ತೂಕ ಪರಿಶೀಲನೆ; ದಾಖಲೆಯ ತೂಕ ಹೆಚ್ಚಿಕೊಂಡ ಭೀಮ
11/08/2025
ಈ ಬಾರಿ ನಡೆಯಲಿರುವ ಮೈಸೂರು ದಸರಾಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊ0ಡಿವೆ. ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆಗಳಿಗೆ ತೂಕ ಪರೀಕ್ಷೆಯನ್ನು ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ನೆರವೇರಿಸಲಾಗಿದೆ.
ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತೂಕ ಪರಿಶೀಲನೆ ನಡೆಸಲಾಯಿತು. 5,360 ಕೆಜಿ ತೂಗಿದ ಅಭಿಮನ್ಯು ದಸರಾ ಆನೆಗಳಲ್ಲೇ ಎರಡನೇ ಹೆಚ್ಚು ತೂಕ ಆನೆಯಾಗಿ ಹೊರಹೊಮ್ಮಿದರೆ, ಮೊದಲ ಸ್ಥಾನದಲ್ಲಿ 5,465 ಕೆಜಿ ಇರುವ ಭೀಮ ಇದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಭೀಮ ದಾಖಲೆ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಂಡಿದ್ದಾನೆ. 9 ವರ್ಷದಿಂದ ದಸರಾ ಮಹೋತ್ಸವಕ್ಕೆ ಬರುತ್ತಿರುವ ಧನಂಜಯ 5,310 ಕೆಜಿ, ಏಕಲವ್ಯ 5,305 ಕೆಜಿ, ಮಹೇಂದ್ರ 5,120 ಕೆಜಿ, ಪ್ರಶಾಂತ 5,110 ಕೆಜಿ ತೂಕ ಹೊಂದಿದೆ. 26 ವರ್ಷದ ಕಂಜನ್ ಹೆಸರಿನ ಆನೆ 4,880 ಕೆಜಿ, ಹೆಣ್ಣಾನೆಗಳಲ್ಲಿ ಲಕ್ಷ್ಮೀ 3,730 ಕೆಜಿ ಹಾಗೂ ಕಾವೇರಿ 3,010 ಕೆಜಿ ತೂಕವಿದೆ.