Udupi: ಒಳಕಾಡಿನ ದೈವಜ್ಞ ಮಂದಿರದಲ್ಲಿ ವರ ಮಹಾಲಕ್ಷ್ಮಿ ಪೂಜೆ (Video)
11/08/2025
ಉಡುಪಿಯ ಒಳಕಾಡು ದೈವಜ್ಞ ಬ್ರಾಹ್ಮಣ ಸಂಘ ಇದರ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ 19 ವರ್ಷದ ವರಮಹಾಲಕ್ಷ್ಮೀ ವೃತಾಚರಣೆ ಹಾಗೂ ಪೂಜೆಯು ಉಡುಪಿ ಒಳಕಾಡಿನ ದೈವಜ್ಞ ಮಂದಿರದಲ್ಲಿ ನಡೆಯಿತು.
ವೇದಮೂರ್ತಿ ವಾಸುದೇವ ಉಪಾಧ್ಯಾಯ ಧಾರ್ಮಿಕ ಪೂಜೆಗಳನ್ನು ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆ, ಕಳಶ ಪ್ರತಿಷ್ಠೆ,ಸಾಮೂಹಿಕ ಕುಂಕುಮ ಅರ್ಚನೆ, ಲಲಿತಾ ಸಹಸ್ರನಾಮ ಪಠಣ,ಭಜನಾ ಕಾರ್ಯಕ್ರಮ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಪೂಜಾ ಕಾರ್ಯದಲ್ಲಿ ರಾಜೇಶ್ ಶೇಟ್,ಸುಮನಾ ಶೇಟ್ ಸಹಕರಿಸಿದರು. ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಎಸ್ ಸುಬ್ರಮಣ್ಯ ಶೇಟ್, ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ಪನಾ ಶೇಟ್, ಕಾರ್ಯದರ್ಶಿ ಜಯಶ್ರೀ ಶೇಟ್, ಮ್ಯಾನೇಜರ್ ವೆಂಕಟೇಶ್ ಶೇಟ್ ಹಾಗೂ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಪಧಾದಿಕಾರಿಗಳು ಉಪಸ್ಥಿತರಿದ್ದರು.