
New Delhi: ಐಟಿ ಮಸೂದೆ ಹಿಂಪಡೆದ ಕೇಂದ್ರ; ಆ.11ರಂದು ಪರಿಷ್ಕೃತ ಆವೃತ್ತಿ ಮಂಡನೆ
09/08/2025
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ 2025 ಅನ್ನು ಹಿಂಪಡೆದುಕೊ0ಡಿದ್ದಾರೆ ಮತ್ತು ಆಯ್ಕೆ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಸೇರಿಸಿದ ನಂತರ ಮಸೂದೆಯ ಪರಿಷ್ಕೃತ ಆವೃತ್ತಿಯನ್ನು ಆಗಸ್ಟ್ 11 ರಂದು ಮಂಡಿಸಲಿದ್ದಾರೆ.
ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಐ-ಟಿ ಮಸೂದೆಯ ನವೀಕರಿಸಿದ ಆವೃತ್ತಿಯು ಆಯ್ಕೆ ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಒಳಗೊಂಡಿರುತ್ತದೆ.
ಮಸೂದೆಯ ಹಲವು ಆವೃತ್ತಿಗಳಿಂದ ಗೊಂದಲವನ್ನು ತಪ್ಪಿಸಲು ಮತ್ತು ಎಲ್ಲಾ ಬದಲಾವಣೆಗಳೊಂದಿಗೆ ಸ್ಪಷ್ಟ ಮತ್ತು ಪರಿಷ್ಕೃತ ಆವೃತ್ತಿಯನ್ನು ಒದಗಿಸಲು, ಆದಾಯ ತೆರಿಗೆ ಮಸೂದೆಯ ಹೊಸ ಆವೃತ್ತಿಯನ್ನು ಸೋಮವಾರ ಸದನದ ಪರಿಗಣನೆಗೆ ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.