
New Delhi: ನ್ಯಾ. ಯಶವಂತ್ ವರ್ಮಾ ಪ್ರಕರಣ; ಮೂವರು ಸದಸ್ಯರ ಸಮಿತಿ ರಚನೆ
12/08/2025
ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ಕುರಿತು ತನಿಖೆಗಾಗಿ ಲೋಕಸಭಾ ಸಭಾಪತಿ ಓಂ ಬಿರ್ಲಾ ಮೂವರು ಸದಸ್ಯರ ಸಮಿತಿಯನ್ನು ಘೋಷಿಸಿದ್ದಾರೆ.
ಈ ಮೂಲಕ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಿಂದ ಭಾರಿ ಪ್ರಮಾಣದ ನಗದು ಪತ್ತೆ ಪ್ರಕರಣದ ತನಿಖೆ ವೇಗವನ್ನು ಪಡೆದುಕೊಂಡಿದೆ. ಸುಪ್ರೀ0 ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಣಿಂದರ್ ಮೋಹನ್ ಮತ್ತು ಹಿರಿಯ ವಕೀಲ ಬಿ. ವಾಸುದೇವ ಆಚಾರ್ಯ ಅವರು ಸಮಿತಿಯ ಸದಸ್ಯರಾಗಿದ್ದಾರೆ.