Puttur: ಮನೆಗಳ್ಳತನ ಪ್ರಕರಣ; ಆರೋಪಿಯ ಬಂಧನ, ಚಿನ್ನಾಭರಣ ಜಪ್ತಿ

Puttur: ಮನೆಗಳ್ಳತನ ಪ್ರಕರಣ; ಆರೋಪಿಯ ಬಂಧನ, ಚಿನ್ನಾಭರಣ ಜಪ್ತಿ


ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಗಸ್ಟ್ 12ರಂದು ನಡೆದಿದ್ದ ಮನೆಗಳ್ಳತನ ಪ್ರಕರಣದ ಆರೋಪಿಯನ್ನು ಪುತ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೆಟ್ಟಣಿಗೆ ಮುಡ್ನೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ(29) ಎಂದು ಗುರುತಿಸಲಾಗಿದೆ. 

ಆರೋಪಿಯಿಂದ 30.120 ಗ್ರಾಂ ಚಿನ್ನ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಗಸ್ಟ್ 12 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಿಂದ ಆರೋಪಿ ಸುಮಾರು 31 ಗ್ರಾಂ ಚಿನ್ನ ಮತ್ತು 5000 ರೂಪಾಯಿ ನಗದು ಕಳ್ಳತನ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪುತ್ತೂರಿನ ಈಶ್ವರಮಂಗಲದಲ್ಲಿ ಬಂಧಿಸಿದ್ದಾರೆ. 

ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಅರುಣ್ ನಾಗೇಗೌಡ ಮತ್ತು ಪೊಲೀಸ್ ನಿರೀಕ್ಷಕ ರವಿ ಬಿ.ಎಸ್ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ರವರ ನೇತೃತ್ವದಲ್ಲಿ ಎಎಸ್‌ಐ ಚಂದ್ರಶೇಖರ್, ಹೆಚ್.ಸಿ ಪ್ರವೀಣ್, ಹೆಚ್.ಸಿ ಮಧು, ಹೆಚ್.ಸಿ ಹರೀಶ್, ಸುಬ್ರಹ್ಮಣ್ಯ, ಆಕಾಶ್, ಯುವರಾಜ್, ಶರಣಪ್ಪ ಪಾಟೀಲ್, ಚಾಲಕರಾದ ಎಆರ್‌ಎಸ್‌ಐ ಯಜ್ಞ, ಹೆಚ್.ಜಿ ಹರಿಪ್ರಸಾದ್ ಮತ್ತು ಹೆಚ್.ಜಿ ನಿತೇಶ್‌ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.


Ads on article

Advertise in articles 1

advertising articles 2

Advertise under the article