
Udupi: ಹಡೀಲು ಗದ್ದೆಯಲ್ಲಿ ಕೃಷಿ ಕಾರ್ಯ; ಯುವಕರು, ವಿದ್ಯಾರ್ಥಿಗಳು ಭಾಗಿ (video)
03/08/2025
ಉಡುಪಿಯ ಕೇದಾರೋತ್ಥಾನ ಟ್ರಸ್ಟ್ ಮೂಲಕ ಮಾಜಿ ಶಾಸಕ ರಘುಪತಿ ಭಟ್ ಅವರು ಉಡುಪಿಯಲ್ಲಿ ಕೈಗೊಂಡ ಹಡಿಲು ಭೂಮಿ ಕೃಷಿ ಎಂಬ ಭತ್ತ ನಾಟಿ ಮಾಡುವ ಕಾರ್ಯಕ್ರಮ 5 ವರ್ಷಗಳಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆದ ಯುವಕರು ಕೇದಾರೋತ್ಥಾನ ರೈತ ಉತ್ಪಾದಕರ ಕಂಪೆನಿ ಮೂಲಕ ಸತತ 5 ವರ್ಷಗಳಿಂದ ನೂರಾರು ಎಕರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದು, ಈ ವರ್ಷದ ಕಡೇ ನಟ್ಟಿ ಕುತ್ಪಾಡಿ ಶಾಲೆ ಬಳಿ ನಡೆಯಿತು.
ರಘುಪತಿ ಭಟ್ ಅವರು ಉಡುಪಿ ಶಾಸಕರಾಗಿದ್ದ ಅವಧಿಯಲ್ಲಿ ಹಮ್ಮಿಕೊಂಡ ಹಡೀಲು ಗದ್ದೆಯಲ್ಲಿ ಕೃಷಿ ಮಾಡುವ ಕಾರ್ಯ 1500ಕ್ಕೂ ಅಧಿಕ ಎಕರೆ ಜಾಗದಲ್ಲಿ ನಡೆದಿದೆ. ಆಗಸ್ಟ್ 3ರಂದು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಡಿಲು ಭೂಮಿ ಕೃಷಿಯಲ್ಲಿ ತೊಡಗಿ ಸ್ವಯಂ ಪ್ರೇರಿತರಾಗಿ ಕೃಷಿ ಕಾರ್ಯ ಮಾಡುತ್ತಿರುವ ಕೃಷಿಕರನ್ನು ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ನಾಟಿ ಕಾರ್ಯದಲ್ಲಿ ಯುವಕರು, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು.