ಜ.15: ಶೀರೂರು ಪರ್ಯಾಯ ವಿಶೇಷ ದೀಪಾಲಂಕಾರಕ್ಕೆ ಚಾಲನೆ
Thursday, January 15, 2026
ಶೀರೂರು ಪರ್ಯಾಯದ ಅಂಗವಾಗಿ ವಿಶೇಷ ದೀಪಾಲಂಕಾರದ ಉದ್ಘಾಟನೆಯು ಜ.15ರಂದು ನಡೆಯಲಿದೆ. ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ನ ಮುಂಭಾಗ ಲಯನ್ಸ್ ವೃತ್ತದ ಬಳಿ ಜ. 15ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಉಡುಪಿ ನಗರ ಎಲ್ಲೆಡೆ ಆಕರ್ಷಕ ದ್ವಾರಗಳಿಂದ ಸ್ವಾಗತ ಕಮಾನುಗಳಿಂದ ಕಂಗೊಳಿಸುತ್ತಿದೆ. ಇದಕ್ಕೆ ಹೆಚ್ಚಿನ ಮೆರುಗು ನೀಡಲು ಉಡುಪಿ ನಗರವನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.