-->
 ಚಪ್ಪಲಿ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಮಾಲಕನಿಗೆ 3 ವರ್ಷ ಜೈಲು ಶಿಕ್ಷೆ

ಚಪ್ಪಲಿ ಅಂಗಡಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಮಾಲಕನಿಗೆ 3 ವರ್ಷ ಜೈಲು ಶಿಕ್ಷೆ


5 ವರ್ಷಗಳ ಹಿಂದೆ ಚಪ್ಪಲಿ ಖರೀದಿಸಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಕಿನ್ನಿಗೋಳಿಯ ಶೂ ಫ್ಯಾಶನ್ ಅಂಗಡಿ ಮಾಲಕ ಸಂಶುದ್ದೀನ್‌ಗೆ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 10,500 ರೂಪಾಯಿ ದಂಡ ವಿಧಿಸಿದೆ.

2021ರ ಡಿಸೆಂಬರ್ 12ರಂದು ಕಿನ್ನಿಗೋಳಿಯ ಶೂ ಫ್ಯಾಶನ್ ಅಂಗಡಿಗೆ ಚಪ್ಪಲಿ ಖರೀದಿಸಲು ಬಂದ ಮಹಿಳೆಯನ್ನು, ಅಂಗಡಿ ಮಾಲಕ ಸಂಶುದ್ದೀನ್ ಎಂಬಾತನು ಚಪ್ಪಲಿ ತೋರಿಸುವ ನೆಪದಲ್ಲಿ ಅಂಗಡಿಯೊಳಗಿನ ಕಂಪಾರ್ಟ್ಮೆOಟ್‌ಗೆ ಕರೆದುಕೊಂಡು ಹೋಗಿ, ಮಹಿಳೆಯ ಭುಜ ಮುಟ್ಟಿ, ಎದೆಗೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದ. ಈ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 136/2021 ಕಲಂ 342, 354(ಎ), 354(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕೆ. ಕುಸುಮಾಧರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿನಾಯಕ ತೊರಗಲ್ ಅವರು ಆರೋಪಿಯನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಮೂಡಬಿದ್ರೆ ಹಿರಿಯ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ನ್ಯಾಯಾಧೀಶರಾದ ಮಧುಕರ ಪಿ. ಬಾಗವತ್ ಅವರು 2026ರ ಜ.6ರಂದು ತೀರ್ಪು ಪ್ರಕಟಿಸಿ ಆರೋಪಿ ಸಂಶುದ್ದೀನ್ ದೋಷಿ ಎಂದು ಘೋಷಿಸಿದರು. ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಸಜೀವ ಜೈಲು ಶಿಕ್ಷೆ ಹಾಗೂ 10,500 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. 

Ads on article

Advertise in articles 1

advertising articles 2

Advertise under the article