ಉಡುಪಿ ನಗರ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ನೀಲೇಶ್ ಚೌಹಾಣ್ ನೇಮಕ
Wednesday, January 07, 2026
ಉಡುಪಿ ನಗರ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ನೀಲೇಶ್ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.
ಈ ಮೊದಲು ಉಡುಪಿ ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಮಂಜುನಾಥ್ ಬಡಿಗೇರ್ ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಿದ ನಂತರ ತೆರವಾದ ಸ್ಥಾನಕ್ಕೆ ಮಣಿಪಾಲ ಠಾಣೆಯ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ಪ್ರಭಾರ ಇನ್ಸ್ ಪೆಕ್ಟರ್ ಆಗಿ ನೇಮಿಸಲಾಗಿತ್ತು. ಇದೀಗ ಉಡುಪಿ ಡಿ.ಎಸ್.ಬಿ ಇನ್ಸ್ ಪೆಕ್ಟರ್ ನೀಲೇಶ್ ಚೌಹಾಣ್ ಅವರನ್ನು ಉಡುಪಿ ನಗರ ಠಾಣೆಯ ಇನ್ಸ್ ಪೆಕ್ಟರ್ ಆಗಿ ನೇಮಕ ಮಾಡಲಾಗಿದೆ.