ಷೇರ್ ಮಾರ್ಕೆಟ್ ಲಾಭಾಂಶ ಆಮಿಷ: 71.74 ಲಕ್ಷ ರೂ. ವಂಚನೆ
Thursday, January 22, 2026
ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ, ಸಿಂಗಾಪುರದಲ್ಲಿ ಅಕೌಂಟೆOಟ್ ಆಗಿರುವ ವ್ಯಕ್ತಿಯಿಂದ ಬರೋಬ್ಬರಿ 71.74 ರೂ. ಲಕ್ಷ ವಂಚಿಸಿರುವ ಪ್ರಕರಣವೊಂದು ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಿಂಗಾಪುರದಲ್ಲಿ ಅಕೌಂಟೆOಟ್ ಆಗಿರುವ ಮಹೇಶ್ ಶೆಟ್ಟಿಗಾರ್ ಅವರಿಗೆ ಜ.3ರಂದು ಒಮ್ಮಿಫಿಕ್ಸ್ಪ್ರೊ ಎಂಬ ಹೆಸರಿನಿಂದ ವಾಟ್ಸಪ್ ಮೂಲಕ ಸಂದೇಶ ಬಂದಿದ್ದು, ಷೇರ್ ಮಾರ್ಕೆಟ್ ಹೂಡಿಕೆಯಲ್ಲಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ನಂಬಿಸಲಾಗಿದೆ. ಆರೋಪಿಯ ಸೂಚನೆಯಂತೆ ಮಹೇಶ್ ಅವರು ಜ.4ರಿಂದ 18ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಖಾತೆ ಮೂಲಕ ಒಟ್ಟು 71.74 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ.
ಆದರೆ ಇದುವರೆಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಲೀ ವಾಪಸ್ ನೀಡದೇ ವಂಚನೆ ನಡೆಸಲಾಗಿದೆ ಎಂದು ಮಹೇಶ್ ಅವರ ಪತ್ನಿ ಯಶೋಧ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬOಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.