-->
 ಬಿಜೆಪಿ ನಿಕಟ ಪೂರ್ವ ಮಂಡಲಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಉಚ್ಛಾಟನೆ

ಬಿಜೆಪಿ ನಿಕಟ ಪೂರ್ವ ಮಂಡಲಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಉಚ್ಛಾಟನೆ


ಬೈಂದೂರು ಬಿಜೆಪಿ ಮಂಡಲದ ನಿಕಟ ಪೂರ್ವ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಈ ಕುರಿತು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಅವರು ಅಧಿಕೃತ ನೋಟಿಸ್ ಕಳುಹಿಸಿದ್ದಾರೆ.

ಪಕ್ಷದ ಜಿಲ್ಲಾ ಮುಖಂಡರು ನೀಡಿದ್ದ ಸ್ಪಷ್ಟ ಹಾಗೂ ಪುನರಾವರ್ತಿತ ಸೂಚನೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ, ಪಕ್ಷದ ಅಧಿಕೃತ ವೇದಿಕೆಗಳನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಪಕ್ಷದ ಘನತೆ, ಶಿಸ್ತು ಮತ್ತು ಏಕತೆಗೆ ಗಂಭೀರ ಹಾನಿ ಉಂಟುಮಾಡಿದೆ ಎಂದು  ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಪಕ್ಷದ ನೇತೃತ್ವದ ವಿರುದ್ಧ ನಿರಂತರವಾಗಿ ಅವಮಾನಕಾರಿಯಾಗಿ ಮಾತನಾಡಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ, ಅಸಮಾಧಾನ ಹಾಗೂ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಇದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಈ ಎಲ್ಲಾ ಅಶಿಸ್ತಿನ, ಜವಾಬ್ದಾರಿಯಿಲ್ಲದ ಹಾಗೂ ಪಕ್ಷವಿರೋಧಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಉನ್ನತ ನಾಯಕತ್ವದ ಆದೇಶದ ಮೇರೆಗೆ ದೀಪಕ್ ಕುಮಾರ್ ಶೆಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಅನಿತಾ ಆರ್.ಕೆ. ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article