ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೆಂಕಿ ಅವಘಡ; 900ಕ್ಕೂ ಅಧಿಕ ಅಡಿಕೆ ಸಸಿಗಳು ಬೆಂಕಿಗಾಹುತಿ
Wednesday, January 07, 2026
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು 900ಕ್ಕೂ ಅಧಿಕ ಅಡಿಕೆ ಸಸಿಗಳು ಬೆಂಕಿಗಾಹುತಿಯಾದ ಘಟನೆ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬೂದಿಯಾರು ಎಂಬಲ್ಲಿ ನಡೆದಿದೆ.
ಬೂದಿಯಾರು ನಿವಾಸಿ ಗಣೇಶ್ ರೈ ಎಂಬವರಿಗೆ ಸೇರಿದ ತೋಟದಲ್ಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಂದು ವರ್ಷದ ಹಿಂದೆ ನೆಟ್ಟ ಅಡಿಕೆ ಸಸಿಗಳು ಸುಟ್ಟು ಹೋಗಿವೆ. ಹೊಲದಲ್ಲಿ ಅಳವಡಿಸಲಾದ ನೀರಿನ ಪೈಪ್ ಗಳಿಗೂ ಹಾನಿಯಾಗಿವೆ. ಸುಮಾರು 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.