ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚೂರಿ ಇರಿತ; ನಾಲ್ವರು ಆರೋಪಿಗಳ ಬಂಧನ
Wednesday, January 07, 2026
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬOಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ, ಮೌನಪ್ಪ, ಸಂಪತ್ ಬಂಧಿತರು. ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕ ಬಸವಂತ ಕಡೋಲ್ಕರ್‌ಗೆ ನಿನ್ನೆ ಚೂರಿ ಇರಿದು ಹತ್ಯೆಗೆ ಯತ್ನ ನಡೆದಿತ್ತು. ಪ್ರಕರಣ ಸಂಬAಧ ಚಾಕು ಇರಿತಕ್ಕೊಳಗಾದ ಬಸವಂತ ಸ್ನೇಹಿತ ಮದನ ಕ್ಯಾಂಪ್ ಠಾಣೆಯಲ್ಲಿ ದೂರು ನೀಡಿದ್ದರು. ದೂರನ್ನು ಆಧರಿಸಿ ಎಸಿಪಿ ಖಡೇಬಜಾರ್ ಶೇರಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.