-->
 ಶಿರೂರು ಪರ್ಯಾಯದ ವಿಶೇಷ ಆಮಂತ್ರಣ ಪತ್ರಿಕೆ ಬಿಡುಗಡೆ, ಮಾಧ್ಯಮ ಕೇಂದ್ರ ಉದ್ಘಾಟನೆ

ಶಿರೂರು ಪರ್ಯಾಯದ ವಿಶೇಷ ಆಮಂತ್ರಣ ಪತ್ರಿಕೆ ಬಿಡುಗಡೆ, ಮಾಧ್ಯಮ ಕೇಂದ್ರ ಉದ್ಘಾಟನೆ


ಶಿರೂರು ಪರ್ಯಾಯದ ವಿಶೇಷ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮತ್ತು ಮಾಧ್ಯಮ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. 

ಉಡುಪಿ ಶಾಸಕ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾಧ್ಯಮ ಕೇಂದ್ರ ಉದ್ಘಾಟಿಸಿದರು. ಆನೆಗುಡ್ಡೆ ಕ್ಷೇತ್ರದ ಮೊಕ್ತೇಸರ ಶ್ರೀ ರಮಣ ಉಪಾಧ್ಯಾಯ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹದಿಂದ ಸಾಂಗವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ ಪುರಪ್ರವೇಶ ಕಾರ್ಯಕ್ರಮದ ವ್ಯವಸ್ಥೆಗಳು ಮತ್ತು ಪರ್ಯಾಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. 

ಪುರಪ್ರವೇಶ ಮೆರವಣಿಗೆಯ ಸಂಚಾಲಕ ಗಣೇಶ್ ರಾವ್ ಮಾತನಾಡಿ, ಪುರಪ್ರವೇಶ ಮೆರವಣಿಗೆ  ಕಡಿಯಾಳಿಯಿಂದ ಹೊರಟು ಸಿಟಿಬಸ್ ಸ್ಟಾಂಡ್ ಮೂಲಕ ಕೃಷ್ಣ ಮಠ ತಲುಪಲಿದೆ. ಸುಮಾರು 1000 ಕ್ಕೂ ಅಧಿಕ ಭಜಕರು, ಉಡುಪಿಯ ಸ್ಥಳೀಯ ಜಾನಪದ ತಂಡಗಳು, ಅತಿಥಿ ಅಭ್ಯಾಗತರು ಪುರಪ್ರವೇಶ ಮೆರಣಿಗೆಯಲ್ಲಿ ಭಾಗವಹಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಪ್ರತೀ ಮನೆಯಿಂದ ಹೊರೆಕಾಣಿಕೆ ಸಲ್ಲಿಕೆಯಾಗಬೇಕೆಂಬ ಶ್ರೀ ವೇದ ವರ್ಧನ ತೀರ್ಥರ ಆಶಯದಂತೆ ಎಂಟು ವಲಯಗಳಾಗಿ ವಿಂಗಡಿಸಿ ಒಟ್ಟು 54 ಹೊರೆಕಾಣಿಕೆ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೀನುಗಾರರ ಸಂಘ, ಸಹಕಾರಿ ಯೂನಿಯನ್, ಬೆಳ್ತಂಗಡಿ ಭಕ್ತರ ತಂಡದಿOದ  ಕನ್ನರ್ಪಾಡಿ ಭಕ್ತಬಳಗ, ಮಟ್ಟು ಗುಳ್ಳ ಸಮರ್ಪಣೆ ಹಾಗೂ ವಿವಿಧ ತಾಲೂಕು ಕೇಂದ್ರಗಳಿOದ ಸಂಘ ಸಂಸ್ಥೆಗಳಿOದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ ಎಂದರು. 

ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಇನ್ನು ಕೇವಲ ಹತ್ತು ದಿನಗಳು ಬಾಕಿ ಉಳಿದಿದ್ದು ಪರ್ಯಾಯದ ಬೇರೆ ಬೇರೆ ಅಗತ್ಯ ಕಾರ್ಯಕ್ರಮಗಳು ನಡೆಯುತ್ತಿದೆ. ನಗರಸಭೆಯ ಮೂಲಕ ನಗರದ ರಸ್ತೆ ಅಭಿವೃದ್ಧಿ, ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳ ಕೆಲಸವೂ ನಡೆಯುತ್ತಿದೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ, ಮಠದ ದಿವಾನರಾದ ಡಾ ಉದಯಕುಮಾರ್ ಸರಳತ್ತಾಯ, ಪ್ರಧಾನ ಕಾರ್ಯದರ್ಶಿ  ಮಟ್ಟಾರ್ ರತ್ನಾಕರ ಹೆಗ್ಡೆ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಭಟ್, ಬಾಲಾಜಿ ಯೋಗೀಶ್ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಇಂದ್ರಾಳಿ ಜಯಕರ್ ಶೆಟ್ಟಿ, ಸಗ್ರಿ ಗೋಪಾಲಕೃಷ್ಣ ಸಾಮಗ, ಗಣೇಶ್ ರಾವ್, ರಮೇಶ್ ಕಾಂಚನ್, ರಮೇಶ್ ಬಂಗೇರ, ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್, ಮಧುಕರ್ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ಅಶ್ವಥ್ ಭಾರಧ್ವಜ್ ಕಾರ್ಯಕ್ರಮ ನಿರೂಪಿಸಿದರು. 



Ads on article

Advertise in articles 1

advertising articles 2

Advertise under the article