ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆಹಚ್ಚಿದ ಗಂಗೊಳ್ಳಿ ಪೊಲೀಸರು
Thursday, January 08, 2026
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಸಮೀಪ ಆಟವಾಡುತ್ತಿದ ಬಾಲಕ ಏಕಾಏಕಿ ನಾಪತ್ತೆಯಾಗಿದ್ದು, ಪೊಲೀಸರ ಸತತ ಹುಡುಕಾಟದ ಬಳಿಕ ರಾತ್ರಿ 12.40 ರ ವೇಳೆ ಪತ್ತೆಯಾಗಿದ್ದಾನೆ. ಗುಜ್ಜಾಡಿ ಬೆಣ್ಗೆರೆ ಎಂಬಲ್ಲಿ ಮನೆ ಸಮೀಪದ ಎತ್ತರ ಪ್ರದೇಶದ ಕಲ್ಲಿನ ಸಂದಿನಲ್ಲಿ ಕುಳಿತಿದ್ದ ಬಾಲಕನನ್ನು ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ತಂಡ ಪತ್ತೆ ಮಾಡಿದ್ದಾರೆ.
ಸ್ಥಳೀಯ ಸರಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಸಂಜೆ ಶಾಲೆ ಮುಗಿದ ಬಳಿಕ ಮನೆಗೆ ಬಂದು ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ. ಸಂಜೆಯಾದರೂ ಮನೆಗೆ ಬಾರದಿದ್ದಾಗ ಮನೆಯವರು ಹುಡುಕಾಡಿದ್ದಾರೆ. ಆದರೆ ಅವನ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಗಂಗೊಳ್ಳಿ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ವಿವಿದೆಡೆ ಹುಡುಕಾಟ ನಡೆಸಿದ್ದಾರೆ. ತಡರಾತ್ರಿ 12.40 ರ ಸುಮಾರಿಗೆ ಎತ್ತರದ ಕಲ್ಲಿನ ಸಂದುಗಳಲ್ಲಿ ಬಾಲಕನಿರುವುದು ಕಂಡು ಬಂದಿದೆ. ಠಾಣಾಧಿಕಾರಿ ಪವನ್ ನಾಯಕ್ ಆತನನ್ನು ರಕ್ಷಿಸಿ ಮನೆಯವರಿಗೆ ಹಸ್ತಾಂತರಿಸಿದರು.
ಗOಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬಾಲಕನ ಪತ್ತೆ ಕಾರ್ಯದಲ್ಲಿ ಸಹಕಾರ ನೀಡಿದ್ದರು.