ಆಪ್ತ ವಲಯದಲ್ಲಿನ ಭ್ರಷ್ಟಾಚಾರ ಆರೋಪ ಸಿದ್ದರಾಮಯ್ಯ ಅವರಿಗೆ ಶೋಭೆಯಲ್ಲ ; ನಟ ಪ್ರಕಾಶ್ ರಾಜ್(Video)
Thursday, January 08, 2026
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದ ಮೇಲಿನ ಭ್ರಷ್ಟಾಚಾರದ ಆರೋಪಗಳು ಶೋಭೆ ತರುವುದಿಲ್ಲ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೊಷ್ಟಿಯಲ್ಲಿ ಅವರು ಮಾತನಾಡಿದರು. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನಮ್ಮದು ನಿರಂತರ ವಿರೋಧಪಕ್ಷ. ಆದರೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ದಾಖಲೆ ಮುರಿದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್ ದಾಖಲೆ ಎಲ್ಲರೂ ಮುರಿಯುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಎಲ್ಲವನ್ನು ಸರಿಮಾಡಿಕೊಂಡು ಪಾರದರ್ಶಕವಾದ ಆಡಳಿತ ನೀಡಬೇಕು. ದೇವರಾಜ ಅರಸು ಕಾಲಘಟ್ಟ ಬೇರೆ, ಸಿದ್ದರಾಮಯ್ಯ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಒಳ್ಳೆಯ ಅಹಿಂದ ನಾಯಕರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಬರೀ ಹೊಗಳುಭಟ್ಟ ಅಲ್ಲ. ಪ್ರಶ್ನೆಯನ್ನು ಕೇಳುತ್ತೇನೆ. ನಾವು ಯಾವುದೇ ರಾಜಕೀಯ ಪಕ್ಷವಲ್ಲ, ನಿರಂತರ ವಿರೋಧಪಕ್ಷ ಎಂದು ಹೇಳಿದರು.
ನನಗೆ ಜೀವನದಲ್ಲಿ ಹಿಂದಿರುಗಿ ನೋಡುವ ಅಭ್ಯಾಸನೇ ಇಲ್ಲ. ಮುಂದೆ ಸಾಗುತ್ತಾ ಪ್ರಯಾಣ ಬೆಳೆಸುವುದು ನನ್ನ ಗುರಿ. ಜೀವನದಲ್ಲಿ ಪ್ರಯಾಣ ಬಹಳ ಮುಖ್ಯ ಎಂದರು.