ಶೀರೂರು ಪರ್ಯಾಯ ಹೊರೆಕಾಣಿಕೆ ಸಮರ್ಪಣೆ
Thursday, January 15, 2026
ಶೀರೂರು ಪರ್ಯಾಯದ ಅಂಗವಾಗಿ ಕಾಪು ,ಬೆಳ್ಮಣ್ ಮತ್ತು ಅಲೆವೂರು ವಲಯದ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಇದರ ಜೊತೆ ವಿಶ್ವಕರ್ಮಸಮಾಜ, ಹಾಲು ಮತ ಸಭೆ ಉಡುಪಿ ಜಿಲ್ಲೆಯ ವತಿಯಿಂದಲೂ ಹೊರೆಕಾಣಿಕೆ ಸಮರ್ಪಿಸಲಾಯಿತು. ನಗರದ ಜೋಡುಕಟ್ಟೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ, ಗೌರವ ಸಂಚಾಲಕ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಗೀಶ್ ಶೆಟ್ಟಿ ಬಾಲಾಜಿ, ಗೀತಾಂಜಲಿ ಸುವರ್ಣ, ಕಾರ್ಯದರ್ಶಿ ಮೋಹನ್ ಭಟ್ , ವಿವಿಧ ವಲಯಗಳ ಭಕ್ತರು, ವಿವಿದ ಸಮುದಾಯದ ಭಕ್ತರು ಸೇರಿದಂತೆ ಅನೇಕರು ಭಾಗಿಯಾದರು.


