ಮರಳು ಕಳವುಗೈದು ಮಾರಾಟಕ್ಕೆ ಯತ್ನ; ಆರೋಪಿಯ ಬಂಧನ
Tuesday, January 06, 2026
ಹಿರಿಯಡ್ಕದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಹಿರಿಯಡ್ಕ ಪೊಲೀಸರು ಬೇಧಿಸಿದ್ದಾರೆ. ಈ ವೇಳೆ ಆರೋಪಿ ಲಾರಿ ಚಾಲಕ ಶೇಖ್ ಮಹಮ್ಮದ್ ನದೀಮ್ ಬಂಧಿಸಿದ್ದಾರೆ.
ಜನವರಿ 2ರಂದು ಮಧ್ಯಾಹ್ನ 12:30ರ ಸುಮಾರಿಗೆ ಅಂಜಾರು ರಿಂಗ್ ರೋಡ್ ಬಳಿ ಹಿರಿಯಡ್ಕ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳು ಸಆಗಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸುಮಾರು ಮೂರು ಯುನಿಟ್ ಮರಳು ಸಾಗಾಟ ಮಾಡಲಾಗುತ್ತಿದ್ದು, ಅದರ ಮೌಲ್ಯ ಸುಮಾರು 13000 ರೂಪಾಯಿ ಎಂದು ಅಂದಾಜಿಸಲಾಗಿದೆ. ಚೇರ್ಕಾಡಿ ಕನ್ನಾರು ಪೆಟ್ರೋಲ್ ಬಂಕ್ ಸಮೀಪದಿಂದ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಚಾಲಕ ಶೇಖ್ ಮಹಮ್ಮದ್ ನದೀಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬAಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.