ಪುತ್ತೂರು ನಗರ ಠಾಣೆಯ ಎಸೈ ಆಂಜನೇಯ ರೆಡ್ಡಿ ವರ್ಗಾವಣೆ
Tuesday, January 06, 2026
ಪುತ್ತೂರು ನಗರಠಾಣೆಯ ಎಸೈ ಆಂಜನೇಯ ರೆಡ್ಡಿ ಅವರನ್ನು ಸುಬ್ರಮಣ್ಯ ಪೊಲೀಸ್ ಠಾಣೆಗೆ ದಿಢೀರ್ ವರ್ಗಾವಣೆ ಮಾಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ಪುತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಇದೀಗ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಉತ್ತಮ ಕಾರ್ಯ ನಿರ್ವಹಣೆಯಿಂದ ಆಂಜನೇಯ ರೆಡ್ಡಿ ಅವರು ಪುತ್ತೂರಿನಲ್ಲಿ ನಾಗರಿಕರ ಶ್ಲಾಘನೆಗೆ ಪಾತ್ರವಾಗಿದ್ದರು. ವಿವಿಧ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಜನಸ್ನೇಹಿ ಪೊಲೀಸ್ ಎಂಬ ಮಾತಿಗೆ ಸಾಕ್ಷಿಯಾಗಿದ್ದರು. ಇದೀಗ ಇವರನ್ನು ದಿಡೀರ್ ವರ್ಗಾವಣೆ ಮಾಡಿದ್ದು, ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.