ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲ್ಕತ್ತಾದ ಬಿಶ್ವನಾಥ್ ಪ್ರಥಮ
Saturday, January 10, 2026
ಕರಾವಳಿ ಉತ್ಸವ ಸಮಿತಿ ಹಾಗೂ ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ಕಲಾಪರ್ಬದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಲ್ಕತ್ತಾದ ಬಿಶ್ವನಾಥ್ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ. ಅನಿಲ್ ಕುಮಾರ್ ಪಿಲ್ಲಿ ತೆಲಂಗಾಣ ದ್ವಿತೀಯ, ವರದನಾಯಕ್ ಬೆಂಗಳೂರು ತೃತೀಯ ಹಾಗೂ ಲಕ್ನೋ ದ ಅನಿಲ್ ರಾಯ್ಸಲ್ ಗೆ ಬೆಸ್ಟ್ ಮೋನ್ಯುಮೆಂಟ್ ಪ್ರಶಸ್ತಿ ಲಭಿಸಿದೆ.
ಮಂಗಳೂರಿನ ಸತೀಶ್ ಇರಾ ಬೆಸ್ಟ್ ಟ್ರೆಡಿಷನ್ ಪ್ರಶಸ್ತಿ, ಕಿಶೋರ್ ದಾಸ್ ವೆಸ್ಟ್ ಬೆಂಗಾಲ್ ಬೆಸ್ಟ್ ಬ್ಲೇಕ್ ಆಂಡ್ ವೈಟ್ ಪ್ರಶಸ್ತಿ, ಅಪುಲ್ ಆಳ್ವ ಮಂಗಳೂರು ಬೆಸ್ಟ್ ಸ್ಪೋರ್ಟ್ಸ್ ಪ್ರಶಸ್ತಿ, ಸತೀಶ್ ಬೆಂಗಳೂರು ಬೆಸ್ಟ್ ಟ್ರಾವೆಲ್ ಪ್ರಶಸ್ತಿ, ಸುರೇಶ್ ಬಂಗೇರ ಮುಂಬಾಯಿ ಬೆಸ್ಟ್ ವಿಲೇಜ್ ಸ್ಟಡಿ ಪ್ರಶಸ್ತಿ, ಸೂರ್ಯ ಪ್ರಕಾಶ್ ಬೆಂಗಳೂರು ಬೆಸ್ಟ್ ಲ್ಯಾಂಡ್ ಸ್ಕೇಪ್ ಪ್ರಶಸ್ತಿ, ರಾಜಶೇಖರ ಬೆಂಗಳೂರು ಬೆಸ್ಟ್ ಕಲ್ಚರ್, ಎಂ.ಸಿ.ಶೇಖರ್ ಹೈದರಬಾದ್ ಬೆಸ್ಟ್ ಪೋರ್ಟ್ರೆಟ್ ಪ್ರಶಸ್ತಿ, ಸುಧೀರ್ ನಜಾರೆ ರಾಯ್ಘಡ್ ಬೆಸ್ಟ್ ಫೆಸ್ಟಿವಲ್ ಪ್ರಶಸ್ತಿ, ಸುದೀಪ್ ರಾಯ್ ಚೌದುರಿ ಕಲ್ಕತ್ತಾ ಬೆಸ್ಟ್ ಕಲರ್ ಪ್ರಶಸ್ತಿ, ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಗೆ ಉದಯ ಶಂಕರ್ ಕಲ್ಕತ್ತಾ, ಮಿಥುನ್ ಉಡುಪಿ ಆಯ್ಕೆಯಾಗಿದ್ದಾರೆ ಎಂದು ಶರಧಿ ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.
