ಉಡುಪಿ ಶ್ರೀಕೃಷ್ಣಮಠದಲ್ಲಿ ಹಗಲು ತೇರು ಉತ್ಸವ ಸಂಪನ್ನ
Thursday, January 15, 2026
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅದ್ಧೂರಿಯಾಗಿ ಚೂಣೋತ್ಸವ ನಡೆಯಿತು. ಹಗಲು ತೇರು ಉತ್ಸವ ಎಂದೂ ಕೂಡ ಕರೆಯಲ್ಪಡುವ ಚೂರ್ಣೋತ್ಸವ ಬೆಳಗ್ಗೆ 8.30ಕ್ಕೆ ಆರಂಭಗೊOಡಿತು. ನೂರಾರು ಮಂದಿ ಭಕ್ತರು ಹಗಲು ರಥೋತ್ಸವವನ್ನು ಕಣ್ತುಂಬಿಕೊOಡರು.
ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ನಂತರ ದೇವರಿಗೆ ಪೂಜೆ, ನೈವೇದ್ಯ ಅರ್ಪಿಸಿ ಮಹಾ ಮಂಗಳಾರತಿ ನೆರವೇರಿತು. ನಂತರ ಬ್ರಹ್ಮರಥಕ್ಕೆ ಚಾಲನೆ ನೀಡಲಾಯಿತು. ಚೆಂಡೆ, ವೇದ ಘೋಷಗಳೊಂದಿಗೆ ಭಕ್ತರು ಜಯಘೋಷ ಕೇಳಿ ಬಂತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರು ಭಕ್ತರಿಗೆ ಪ್ರಸಾದ ವಿತರಿಸಿದರು. ಪ್ರಸಾದಕ್ಕಾಗಿ ಭಕ್ತರು ಮುಗಿ ಬೀಳುವ ದೃಶ್ಯ ಕಂಡು ಬಂತು. ಬ್ರಹ್ಮರಥವು ರಥಬೀದಿಯಯಲ್ಲಿ ಒಂದು ಸುತ್ತು ಬಂದ ಬಳಿಕ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣ, ಉತ್ಸವ ಮೂರ್ತಿಗೆ ಅವಭೃತ ಸ್ನಾನ ನೆರವೇರಿಸಲಾಯಿತು.

.jpeg)
.jpeg)
.jpeg)

.jpeg)

.jpeg)
.jpeg)
.jpeg)