-->
 MIT ವಿದ್ಯಾರ್ಥಿಯ ಸೌರ ನಾವೀನ್ಯತೆ ಆವಿಷ್ಕಾರಕ್ಕೆ ಸರ್ಕಾರದಿಂದ ಸೀಡ್ ಫಂಡಿಂಗ್

MIT ವಿದ್ಯಾರ್ಥಿಯ ಸೌರ ನಾವೀನ್ಯತೆ ಆವಿಷ್ಕಾರಕ್ಕೆ ಸರ್ಕಾರದಿಂದ ಸೀಡ್ ಫಂಡಿಂಗ್


ಮಣಿಪಾಲದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯ ಯಾಂತ್ರಿಕ ಎಂಜಿನಿಯರಿಂಗ್ ವಿದ್ಯಾರ್ಥಿ ಆಲೆನ್ ನೇತನ್ ಕ್ರಾಸ್ಟಾ ಅವರು ಉಪನ್ಯಾಸಕ ರಂಜು ಮಾಮಚನ್ ಅವರ ಮಾರ್ಗದರ್ಶನದಲ್ಲಿ ಸೌರ ನಾವಿನ್ಯತೆ ಕುರಿತು ನಡೆಸಿದ ಆವಿಷ್ಕಾರಕ್ಕೆ ಕರ್ನಾಟಕ ಸರ್ಕಾರದಿಂದ 4 ಲಕ್ಷ ಸೀಡ್ ಫಂಡಿಂಗ್ ಮಂಜೂರಾಗಿದೆ.

ಕರ್ನಾಟಕ ಸರ್ಕಾರದ ಗ್ರಾಸ್‌ರೂಟ್ ಇನೋವೇಷನ್ ಪ್ರೋಗ್ರಾಂ ಅಡಿಯಲ್ಲಿ ಆಲೆನ್ ನೇತನ್ ಕ್ರಾಸ್ಟಾ ಅವರು  ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಯಶಸ್ವಿ ಪಿಚ್ ನಂತರ ಇವರ ಯೋಜನೆಗೆ ಸರ್ಕಾರದಿಂದ ₹4 ಲಕ್ಷ ಸೀಡ್ ಫಂಡಿಂಗ್ ಮಂಜೂರಾಗಿದೆ.

ಈ ಯೋಜನೆಯು ಕಡಿಮೆ ವೆಚ್ಚದ I–V ಕರ್ವ್ ಟ್ರೇಸರ್ ಮತ್ತು ಗೃಹ ಬಳಕೆಯ ಸೌರ ಫಲಕ ಮಾನಿಟರಿಂಗ್ ಸಿಸ್ಟಮ್ ಅಭಿವೃದ್ಧಿಗೆ ಸಂಬಂಧಿಸಿದೆ. ಇದು ಸೌರ ಫಲಕಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ (24/7) ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ. ಧೂಳು ಹಾಗೂ ಪರಿಸರ ಕಾರಣಗಳಿಂದ ಉಂಟಾಗುವ ವಿದ್ಯುತ್ ನಷ್ಟವನ್ನು ಸುಲಭವಾಗಿ ಪತ್ತೆಹಚ್ಚುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕಿದೆ.

ಈ ವ್ಯವಸ್ಥೆಯ ಮೂಲಕ ಸೌರ ಸ್ಥಾಪಕರು ಒಂದೇ ಸಮಯದಲ್ಲಿ ಹಲವು ಸೌರ ಫಲಕಗಳನ್ನು ಪರೀಕ್ಷಿಸಬಹುದಾಗಿದ್ದು, ದೋಷ ಪತ್ತೆ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಜೊತೆಗೆ, ಸಂಶೋಧಕರು ಒಂದೇ ಬೆಳಕು (irradiance) ಪರಿಸ್ಥಿತಿಯಲ್ಲಿ ವಿಭಿನ್ನ ಸೌರ ಫಲಕಗಳ ಕಾರ್ಯಕ್ಷಮತೆಯನ್ನು ನಿಖರವಾಗಿ ಹೋಲಿಕೆ ಮಾಡಲು ಇದು ಸಹಕಾರಿಯಾಗುತ್ತದೆ.

MIT ಮಣಿಪಾಲದಲ್ಲಿ ವಿದ್ಯಾರ್ಥಿ ಆಲೆನ್ ನೇತನ್ ಕ್ರಾಸ್ಟಾ ಅವರು  ರಂಜು ಮಾಮಚನ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೊಳಿಸಿದ ಈ ಆವಿಷ್ಕಾರ ಈಗಾಗಲೇ ಪ್ರೋಟೋಟೈಪ್ ಹಂತವನ್ನು ತಲುಪಿದೆ. ಮುಂದಿನ ಹಂತದಲ್ಲಿ ತಂಡವು ಇದನ್ನು ಹೈ-ಪವರ್ ಆವೃತ್ತಿ ಮತ್ತು ವಾಣಿಜ್ಯ ಬಳಕೆಗೆ ತಕ್ಕ ಉತ್ಪನ್ನವಾಗಿ ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ.


Ads on article

Advertise in articles 1

advertising articles 2

Advertise under the article