ಜಾನುವಾರು ಕಳವು ಪ್ರಕರಣ; ಆರೋಪಿಯ ಬಂಧನ
Friday, January 09, 2026
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣಾ ವ್ಯಾಪ್ತಿಯ ಪೆರುವಾಯಿ ಸೊಸೈಟಿ ಆವರಣದಿಂದ ದನ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಕೋಡಿ ನಿವಾಸಿ ಝಲ್ಫಾನ್ ಮಾಲಿಕ್ ಬಂಧಿತ ಆರೋಪಿ. 2025ರ ನ. 18ರಂದು ಗಣೇಶ್ ರೈ ಹಾಗೂ ನಾರಾಯಣ ನಾಯ್ಕ ಎಂಬವರ ಒಟ್ಟು ನಾಲ್ಕು ದನಗಳನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಗಣೇಶ್ ರೈ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಆರೋಪಿ ಝಲ್ಫಾನ್ ಮಾಲಿಕ್ ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯದ ಆದೇಶದಂತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.