ಗಲಾಟೆ, ಡ್ರಗ್ಸ್ ಪ್ರಕರಣಗಳ ಆರೋಪಿ ಚಿಕ್ಕಮಗಳೂರಿಗೆ ಗಡಿಪಾರು
Friday, January 09, 2026
ಗಲಾಟೆ, ದೊಂಬಿ ಹಾಗೂ ಡ್ರಗ್ಸ್ ಪ್ರಕರಣಗಳ ಆರೋಪಿ ಅಬ್ದುಲ್ ಖಾದರ್@ ಶೌಕತ್ ವಿಟ್ಲ ಎಂಬಾತನನ್ನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಅಬ್ದುಲ್ ಖಾದರ್ ಮೇಲೆ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಎನ್.ಡಿ.ಪಿ.ಎಸ್ ಕಾಯ್ದೆಯಂತೆ 3 ಪ್ರಕರಣಗಳು ದಾಖಲಾಗಿದೆ. ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಜ.8ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ.