ಬೈಕ್ ಡಿಕ್ಕಿಯಾಗಿ ಪಾದಚಾರಿ ವೃದ್ಧ ಸಾವು
Friday, January 09, 2026
ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ಪಡುಬಿದ್ರೆ ಸಮೀಪದ ಉಚ್ಚಿಲ ಬಸ್ ನಿಲ್ದಾಣದ ಬಳಿ ನಡೆದಿದೆ.
ಪಣಿಯೂರು ಸೆಂಟರ್ ನಿವಾಸಿ ಸದಾಶಿವ ಕೋಟ್ಯಾನ್(65) ಮೃತಪಟ್ಟವರು. ಪಡುಬಿದ್ರೆ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಬೈಕ್ ರಸ್ತೆ ದಾಟುತ್ತಿದ್ದ ಸದಾಶಿವ ಅವರಿಗೆ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.