-->
 ಕೃಷಿ ಕೆಲಸಗಳಿಗಾಗಿ ನುರಿತ ಕೃಷಿ ಕೆಲಸಗಾರರ ತಂಡ ರಚನೆ; ಅಲೆವೂರು ದಿನೇಶ್ ಕಿಣಿ

ಕೃಷಿ ಕೆಲಸಗಳಿಗಾಗಿ ನುರಿತ ಕೃಷಿ ಕೆಲಸಗಾರರ ತಂಡ ರಚನೆ; ಅಲೆವೂರು ದಿನೇಶ್ ಕಿಣಿ


ಕೃಷಿ ಯಂತ್ರೋಪಕರಣಗಳು ಲಭ್ಯವಿದ್ದರೂ ಯಂತ್ರ ಚಾಲನೆಗೆ, ಭತ್ತ, ತೆಂಗು, ಅಡಿಕೆ ಕೃಷಿ ಕೆಲಸ ಕಾರ್ಯಗಳಿಗೆ ಕೆಲಸಗಾರರ ಬೇಡಿಕೆ ಬಹಳಷ್ಟು ಇದೆ. ಆದರೆ ಜನ ಸಿಗುತ್ತಿಲ್ಲ. ಅದಕ್ಕಾಗಿ ತಮ್ಮ ಸೊಸೈಟಿಯು ಮುಂದಿನ ದಿನಗಳಲ್ಲಿ ವಿವಿಧ ಕೃಷಿ ಕೆಲಸಗಳಿಗಾಗಿ ನುರಿತ ಕೃಷಿ ಕೆಲಸಗಾರರ ತಂಡ ರಚನೆ ಮಾಡಲಿದೆ ಎಂದು ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಿನೇಶ್ ಕಿಣಿ ಅಲೆವೂರು ತಿಳಿಸಿದ್ದಾರೆ.

ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕರಂಬಳ್ಳಿ ಸಮಿತಿ, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ, ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಶ್ರೀನಿವಾಸ ಆಚಾರ್ಯ ಬೈಲೂರು ಸಹಯೋಗದಲ್ಲಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಮಾಹಿತಿ, ಕೃಷಿಕರ ಸನ್ಮಾನ ಮತ್ತು ಉಚಿತ ಗಿಡಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಆಡಳಿತ ಮಂಡಳಿ ಸದಸ್ಯ ನಾಗರಾಜ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊರಂಗ್ರಪಾಡಿ ಸೊಸೈಟಿ ನಿರ್ದೇಶಕ ವಿಜಯ ಪೂಜಾರಿ, ಬೈಲೂರು ಶ್ರೀನಿವಾಸ ಆಚಾರ್ಯ, ಜಯಲಕ್ಷ್ಮೀ ಎಸ್. ಆಚಾರ್ಯ, ನಾರಾಯಣದಾಸ್ ಉಡುಪ ಬೈಲೂರು, ಸುಬ್ರಹ್ಮಣ್ಯ ತಂತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

Ads on article

Advertise in articles 1

advertising articles 2

Advertise under the article