ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿ ಉತ್ಸವ; ನಾಳೆ ಚೂರ್ಣೋತ್ಸವ
Wednesday, January 14, 2026
ನಾಡಿನೆಲ್ಲೆಡೆ ಇಂದು ಮಕರ ಸಂಕ್ರಾಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠದಲ್ಲಿಯೂ ಜ.14ರಂದು ಮಕರ ಸಂಕ್ರಾಂತಿಯ ಉತ್ಸವ ನಡೆಯಲಿದೆ. ಸಂಜೆ ಬ್ರಹ್ಮರಥ ಸಹಿತ ಮೂರು ರಥಗಳ ರಥೋತ್ಸವ ನಡೆಯಲಿದೆ.
ಈ ಬಾರಿ ಮಕರ ಸಂಕ್ರಮಣದಂದು ಏಕಾದಶಿ ಬಂದಿರುವುದರಿಂದ ಮಠದಲ್ಲಿ ಈ ದಿನ ಅನ್ನ ಪ್ರಸಾದವಿರುವುದರಿಲ್ಲ.
ಇಂದು ಮಠದ ಸ್ವಾಮೀಜಿಗಳು ಏಕಾದಶಿಯ ಉಪವಾಸವಿದ್ದು,(ಜ.15) ನಾಳೆ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳಗ್ಗೆ 9 ಗಂಟೆಗೆ ರಥಬೀದಿಯಲ್ಲಿ ಚೂರ್ಣೋತ್ಸವ ನಡೆಯಲಿದ್ದು, ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ ಎಂದು ಮಠದ ಪ್ರಕಟನೆ ತಿಳಿಸಿದೆ.