ಸಿಎಂ ಡಿಸಿಎಂ ಮಂಗಳೂರು ಭೇಟಿ ಹಿನ್ನೆಲೆ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.
ಸಂಚಾರ ದಟ್ಟಣೆಯಾಗುವ ಮಾರ್ಗ:-
ಕೆಂಜಾರು ಜಂಕ್ಷನ್ – ಮರವೂರು – ಕಾವೂರು – ಬೋಂದೆಲ್ – ಪದವಿನಂಗಡಿ – ಮೇರಿಹಿಲ್ – ಯೆಯ್ಯಾಡಿ – ಕೆ.ಪಿ.ಟಿ.ವೃತ್ತ – ಬಟ್ಟಗುಡ್ಡೆ – ಕದ್ರಿ ಕಂಬಳ – ಭಾರತ್ ಬೀಡಿ ಜಂಕ್ಷನ್ – ಬಂಟ್ಸ್ ಹಾಸ್ಟೆಲ್ – ಪಿ.ವಿ.ಎಸ್ – ನವಭಾರತ್ ವೃತ್ತ – ಡಾ| ಅಂಬೇಡ್ಕರ್ ಜಂಕ್ಷನ್ – ಹಂಪನ್ ಕಟ್ಟೆ – ಕೈರಾಲಿ ಜಂಕ್ಷನ್ – ಅತ್ತಾವರ ಕಟ್ಟೆ – ಅವತಾರ್ ಹೋಟೆಲ್ ಎದುರಿನ ರಸ್ತೆ.
ಪದವುಜಂಕ್ಷನ್ – ನಂತೂರು ವೃತ್ತ – ಪಂಪುವೆಲ್ – ಎಕ್ಕೂರು – ಜಪ್ಪಿನಮೊಗರು – ಕಲ್ಲಾಪು – ತೊಕ್ಕೊಟ್ಟು – ಕುತ್ತಾರ್‌ಪದವು – ದೇರಳಕಟ್ಟೆ– ನಾಟೆಕಲ್ – ಮಂಗಳಾಂತಿ – ಕಲ್ಕಟ – ಮಂಜನಾಡಿ – ನರಿಂಗಾನ.
ಕುತ್ತಾರ್‌ಪದವು – ಕೊರಗಜ್ಜನಕಟ್ಟೆ – ಉಳಿಯ – ಅಂಬ್ಲಮೊಗರು – ಮದಕ ಜಂಕ್ಷನ್
ಕೆಪಿ.ಟಿ.ಜಂಕ್ಷನ್ – ಕೊಟ್ಟಾರಚೌಕಿ – ಕೊಡಿಕಲ್ ಕ್ರಾಸ್ – ಕೂಳೂರು – ಕೆ.ಐ.ಓ.ಸಿ.ಎಲ್ ಜಂಕ್ಷನ್ – ತಣ್ಣೀರುಬಾವಿ – ಬ್ಲೂಪ್ಲ್ಯಾಗ್ ಬೀಚ್ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು. ಅತಿಥಿಗಳು ಸಂಚರಿಸುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಯಾವುದೇ ವಾಹನಗಳು ಸಂಚರಿಸತಕ್ಕುದಲ್ಲ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.