ಹೆಬ್ರಿ ಮೂಲದ ಯೋಧ ಸಚಿನ್ ಶೆಟ್ಟಿ ಕ್ಯಾಟ್ ಕಮಾಂಡೋ ಆಗಿ ನೇಮಕ
Saturday, January 10, 2026
ಭಾರತೀಯ ಸೇನೆಯ ಯೋಧ ಉಡುಪಿ ಜಿಲ್ಲೆಯ ಹೆಬ್ರಿ ನಿವಾಸಿ ಸಚಿನ್ ಶೆಟ್ಟಿ ಅವರು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ನೇಮಕಗೊಂಡಿದ್ದಾರೆ.
ಸಚ್ಚಿನ್ ಶೆಟ್ಟಿ ಹೆಬ್ರಿಯ ದಿ. ಜಗದೀಶ್ ಶೆಟ್ಟಿ ಮತ್ತು ಸತ್ಯವತಿ ಶೆಟ್ಟಿ ದಂಪತಿಯ ಪುತ್ರ. 2012ರಲ್ಲಿ ಸೇನೆಗೆ ಸೇರ್ಪಡೆಗೊಂಡ ಇವರು 1 ವರ್ಷ ಮಧ್ಯಪ್ರದೇಶ ಜಬಲ್ಪುರ್‌ನಲ್ಲಿ ತರಬೇತಿ ಪಡೆದು ಬಳಿಕ ರಾಜಸ್ಥಾನ್, ಜಮ್ಮು ಕಾಶ್ಮೀರ, ಪಂಜಾಬ್ ಹಾಗೂ ಜಮ್ಮು ರಾಷ್ಟ್ರೀಯ ರೈಫೆಲ್ಸ್ನಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.
ಪ್ರಸ್ತುತ 60 ದಿನಗಳ ಎನ್.ಎಸ್.ಜಿ ಕಮಾಂಡೋ ತರಬೇತಿ ಮುಗಿಸಿ ದೆಹಲಿಯ ಕರ್ತವ್ಯಕ್ಕೆ ನೇಮಕಗೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್.ಎಸ್.ಜಿ) ಒಂದು ಸ್ಪೆಷಲ್ ಫೋರ್ಸ್. ಇವರನ್ನು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಎಂದು ಕರೆಯುತ್ತಾರೆ. ಕೆಲವೇ ಆಯ್ದ ಸೈನಿಕರಿಗೆ ಮಾತ್ರ ದೊರೆಯುವ ಅತಿ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎನ್.ಎಸ್.ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಸಚಿನ್ ಶೆಟ್ಟಿ ನೇಮಕಗೊಂಡಿದ್ದಾರೆ.