ಧರ್ಮದ ಹಾದಿಗೆ ಗುಡ್ ಬೈ ಹೇಳಿ ಮಾಡೆಲಿಂಗ್ ಲೋಕಕ್ಕೆ ಮರಳಲಿದ್ದಾರೆ ಸಾಧ್ವಿ..!
Wednesday, January 14, 2026
ಮಹಾಕುಂಭದಲ್ಲಿ ಭಾರೀ ವೈರಲ್ ಆಗಿದ್ದ ಸುಂದರಿ ಸಾಧ್ವಿ ಹರ್ಷ ರಿಚಾರಿಯಾ ಅವರು ಧರ್ಮದ ಹಾದಿಯಿಂದ ಹಿಂದೆ ಸರಿಯಲಿದ್ದಾರೆ. ತಾನು ಎಲ್ಲ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಇನ್ ಫ್ಲುಯೆನ್ಸರ್ ಆಗಿರುವ ಹರ್ಷ ರಿಚಾರಿಯಾ 30ರ ಹರೆಯದ ಚೆಲುವೆ. ಯಾವ ಬಾಲಿವುಡ್ ನಾಯಕಿಗೂ ಈಕೆ ಕಡಿಮೆಯೇನಿಲ್ಲ. ಹೀಗಿದ್ದ ಹರ್ಷ ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದ್ದ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಸುಂದರಿ ಸಾಧ್ವಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರ ಕಾಟ ಸಹಿಸಲು ಅಸಾಧ್ಯವಾಗಿತ್ತು. ಹೀಗಾಗಿ ಎಲ್ಲವನ್ನೂ ಬಿಟ್ಟು ಬರುವ ನಿರ್ಧಾರಕ್ಕೆ ಬಂದಿದ್ದಾರೆ ಹರ್ಷ ರಿಚಾರಿಯಾ.
ಮಹಾಕುಂಭ ಮೇಳ ನಡೆದು ಹೆಚ್ಚು ಕಡಿಮೆ ಒಂದು ವರ್ಷದ ನಂತರ ಹರ್ಷ ರಿಚಾರಿಯಾ ತಮ್ಮ ಮನದ ನೋವು ಹೊರ ಹಾಕಿದ್ದಾರೆ. ತಮ್ಮ ಮೇಲೆ ನಡೆಯುತ್ತಿರುವ ಸೈಬರ್ ದಾಳಿಯಿಂದ ಹೈರಾಣಾಗಿ ಕಣ್ಣೀರಾಗಿದ್ದಾರೆ. ಭಾರತದ ಐತಿಹಾಸಿಕ ಕುಂಭ ಮೇಳದ ಧಾರ್ಮಿಕ ವಾತಾವರಣದಲ್ಲಿ ಟ್ರೋಲ್‌ಗಳ ನೆಗೆಟಿವ್ ಕಾಮೆಂಟ್‌ಗಳು ನನಗೆ ಭಾರೀ ಇರಿಸು-ಮುರಿಸು ಉಂಟುಮಾಡಿವೆ. ಸಾಮಾಜಿಕ ಜಾಲತಾಣ ಹರ್ಷಾ ರಿಚಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊOಡ ವಿಡಿಯೋದಲ್ಲಿ ಅಳುತ್ತಾ, ನಾನು ಸನಾತನ ಧರ್ಮ ತಿಳಿದುಕೊಳ್ಳಲು ಮತ್ತು ಸನಾತನ ಸಂಸ್ಕೃತಿಯ ಜೊತೆ ಸೇರಲು ಕುಂಭ ಮೇಳಕ್ಕೆ ಬಂದಿದ್ದೆ. ಆದರೆ ಟ್ರೋಲ್‌ಗಳ ದ್ವೇಷ ಮತ್ತು ಟೀಕೆಗಳಿಂದಾಗಿ ಇಲ್ಲಿಂದ ಹಿಂತಿರುಗಬೇಕಾಗಿದೆ ಎಂದಿದ್ದಾರೆ.
ಸಾಧ್ವಿಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ಹರ್ಷಾ ರಿಚಾರಿಯಾ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ 1.1 ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಹಿಂದೆ ಹರ್ಷಾ ನಿರೂಪಕಿಯಾಗಿಯೂ ಟಿವಿ ಚಾನೆಲ್‌ಗಳ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಈಕೆ ಕುಂಭಮೇಳದಲ್ಲಿ ಸಾಧ್ವಿ ರೂಪದಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದರು. ಇದೀಗ ಸುಂದರಿ ಸಾಧ್ವಿ ಸನ್ಯಾಸತ್ವ ಬಿಟ್ಟು ಮಾಡೆಲಿಂಗ್ ಲೋಕಕ್ಕೆ ಮರಳಲಿದ್ದಾರೆ.

