ಕೆಮ್ಮಣ್ಣು ಜೂನಿಯರ್ ಕಾಲೇಜಿನ ನಿವೃತ್ತ ಅಧ್ಯಾಪಕ ಬಿ. ಲಕ್ಷ್ಮೀನಾರಾಯಣ ರಾವ್ ನಿಧನ
Wednesday, January 14, 2026
ಉಡುಪಿ ಕೆಮ್ಮಣ್ಣು ಜೂನಿಯರ್ ಕಾಲೇಜಿನ ನಿವೃತ್ತ ಅಧ್ಯಾಪಕ, ಉಡುಪಿ ತೋನ್ಸೆ ವಲಯ ಬ್ರಾಹ್ಮಣ ಸಮಿತಿಯ ಪೂರ್ವಾಧ್ಯಕ್ಷರಾಗಿದ್ದ ಬಿ. ಲಕ್ಷ್ಮೀನಾರಾಯಣ ರಾವ್ (92) ರಾತ್ರಿ ನಿಧನರಾಗಿದ್ದಾರೆ.
ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಲಕ್ಷ್ಮಿ ನಾರಾಯಣ ಅವರು ಉಡುಪಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಡುಪಿ ಕೆಮ್ಮಣ್ಣು ಜೂನಿಯರ್ ಕಾಲೇಜ್‌ನಲ್ಲಿ ಅಧ್ಯಾಪಕರಾಗಿದ್ದ ಲಕ್ಷ್ಮಿ ನಾರಾಯಣ ರಾವ್ ನಾಡಿನ ಪ್ರತಿಷ್ಠಿತ ಮನೆತನದವರಾಗಿದ್ದು, ಸಾವಿರಾರು ವಿದ್ಯಾಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಿ.ಲಕ್ಷಿ ನಾರಾಯಣ ರಾಯರ ನಿಧನಕ್ಕೆ ತೋನ್ಸೆ ವಲಯದ ಬ್ರಾಹ್ಮಣ ಸಮಿತಿ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.