ಭೀಮಾ ಜ್ಯುವೆಲ್ಲರ್ಸ್ ನಿಂದ ಪೊಲೀಸ್ ಇಲಾಖೆಗೆ ಮಹೇಂದ್ರ ಜೀಪು ಕೊಡುಗೆ
Friday, January 02, 2026
ಉಡುಪಿಯ ಭೀಮಾ ಜ್ಯುವೆಲ್ಲರ್ಸ್ ತಮ್ಮ ಸಿಎಸ್‌ಆರ್ ನಿಧಿ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್‌ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದೆ.
ಭೀಮ ಜ್ಯುವೆಲ್ಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಅಪರೇಶನ್ ಹೆಡ್ ಗುರುಪ್ರಸಾದ್ ಅವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ಜೀಪಿನ ಕೀಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರವಿ ಕುಮಾರ್, ಸಮಾಜಸೇವಕ ನಿತ್ಯಾನಂದ ಒಳಕಾಡು, ಭೀಮ ಜ್ಯುವೆಲರ್ಸ್ ಉಡುಪಿ ಇದರ ಶಾಖಾ ಮ್ಯಾನೇಜರ್ ಆಶಿಶ್, ಡೆಪ್ಯುಟಿ ಮ್ಯಾನೇಜರ್ ಸುರ್ಧೀ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಪ್ರಸನ್ನ ಕುಮಾರ್, ಮಾರ್ಕೆಟಿಂಗ್ ಡಿಪಾರ್ಟ್ಮೆಂಟ್‌ನ ಮಂಜುನಾಥ ಅಮೀನ್, ಸೇಲ್ಸ್ ಮತ್ತು ಅಪರೇಶನ್ ಹೆಡ್ ರಾಘವೆಂದ್ರ ಭಟ್ ಹಾಗೂ ಇತರರು ಹಾಜರಿದ್ದರು.


