-->
 ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಿದ್ದಾರೆ- ಶ್ರೀರಾಮುಲು ಗಂಭೀರ ಆರೋಪ

ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿಸಿದ್ದಾರೆ- ಶ್ರೀರಾಮುಲು ಗಂಭೀರ ಆರೋಪ


ಬಳ್ಳಾರಿಯ ಬ್ಯಾನರ್ ಗಲಾಟೆ ವೇಳೆ ಶಾಸಕ ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

ಗಲಾಟೆ ಸಂಬOಧ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ನಿನ್ನೆ ಆದ ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಾಗಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಎನ್ನುವ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಭವಿಷ್ಯ ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ. ಫೈರಿಂಗ್‌ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ಈಗಾಗಲೇ ಆಗಿರುವ ಪ್ರತಿಯೊಂದೂ ಮಾಹಿತಿಯನ್ನೂ ಹೇಳಿದ್ದೇನೆ. ನಾನು ರಾಜಕಾರಣದಲ್ಲಿ ಸಾಕಷ್ಟು ನೋಡಿದ್ದೇನೆ ಎಂದು ಬೇಸರ ಹೊರಹಾಕಿದರು. ಬ್ಯಾನರ್ ಕಟ್ಟುವುದು ಬೇಡ ಎಂದು ಹೇಳಿಲ್ಲ. ಕಾರು ಹೋಗುವುದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕಿ ಜಗಳ ಆಯ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅದನ್ನ ಅವರೂ ತೋರಿಸಿದ್ರು. ಅಷ್ಟರೊಳಗೆ ಪೊಲೀಸರು ಬಂದು, ಚದುರಿಸಿದ್ರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳು ಜಾಸ್ತಿ ಆದ್ವು. ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿಗಾರ್ಡ್ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದ್ರು. ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೇ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. 

ಫೈರಿಂಗ್ ಮಾಡೋದಕ್ಕೆ ಅವಕಾಶ ಯಾರು ಕೊಟ್ರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗ್ತಿದೆ ಎಂದು ತಿಳಿಸಿದರು.ಮಳೆ ಸುರಿಸಿದಂತೆ ಕಲ್ಲು ಸುರಿಸಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಗಾಯಗೊಂಡಿದ್ದಾರೆ. ಈಗಾಗಲೇ ನಮ್ಮವರನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಅವರು ಕಲ್ಲು ತೂರಾಟ ಮಾಡಿದಾಗ, ನಮ್ಮವರೂ ಕಲ್ಲು ತೂರಿದ್ದಾರೆ. ಅವರ ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದಾರೆ. ಸತೀಶ್ ರೆಡ್ಡಿ ಹಾಲಿ, ಮಾಜಿ ಶಾಸಕನೂ ಅಲ್ಲ. ಬಿಹಾರ್ ಮಾದರಿಯಲ್ಲಿ ಸತೀಶ್ ರೆಡ್ಡಿ ಗನ್ ಇಟ್ಕೊಂಡಿದ್ದಾನೆ. ಎಷ್ಟು ದೌರ್ಜನ್ಯ ಇವರದ್ದು? ಆ ರೀತಿ ಫೈರ್ ಮಾಡುತ್ತಾ ಹೋದ್ರೆ ಏನ್ ಮಾಡೋದಕ್ಕೆ ಆಗ್ತದೆ? ಹಾಗಾಗಿ ಕಾರ್ಯಕರ್ತರೆಲ್ಲರೂ ಒಂದೆಡೆ ಸೇರಿದ್ದಾರೆ. ಆದ್ರೂ ನಾವು ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಹೇಳಿದ್ದೇವೆ. ಸತ್ಯವನ್ನೂ ಯಾರೂ ಮುಚ್ಚಡಲು ಆಗಲ್ಲ. ಕೆಟ್ಟ ಕೆಲಸ ಮಾಡಿದ ದಿನ ರಾಜಕಾರಣದಲ್ಲಿ ಇರೋದಿಲ್ಲ. ಶಾಂತಿಯಾದ ಊರಲ್ಲಿ ಈ ರೀತಿ ದೌರ್ಜನ್ಯ ಮಾಡಿ, ಫೈರಿಂಗ್ ಮಾಡೋದು ಅಂದ್ರೆ ಏನು? ಇದು ಪೋಲಿಸರಿಂದ ಆಗಿರೋ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಯಿಂದ ಆಗಿರೋದು. ನಮ್ಮ ತಾಯಿ-ತಂದೆ ಅದನ್ನ ಕಲಿಸಿಲ್ಲ. ಧರ್ಮದ ಪರವಾಗಿ ನಾವಿರುವವರು. ಯಾರ ಗನ್‌ನಿಂದ ಯಾರು ಹಾರಿಸಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ನಮ್ಮ ಗನ್‌ಮ್ಯಾನ್ ಬಳಿಯ ಬುಲೆಟ್‌ಗಳನ್ನೂ ಲೆಕ್ಕ ಮಾಡಲಿ. ಕೂಡಲೇ ಎಫ್‌ಎಸ್‌ಎಲ್ ಕೊಡ್ರಿ ಎಂದು ಮನವಿ ಮಾಡಿದರು.

ನಾನು ಮನಸ್ಸು ಮಾಡಿದ್ರೆ ಬಳ್ಳಾರಿ ಭಸ್ಮ ಮಾಡ್ತೇನೆ ಅಂತಾ ಭರತ್ ರೆಡ್ಡಿ ಹೇಳಿದ್ದಾರೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅವರ ಮನೆ ಸುಡ್ತಿದ್ದೆ ಅಂತ ಭರತ್ ರೆಡ್ಡಿ ಅಂದಿದ್ದಾರೆ. ಅದಕ್ಕಾಗಿ ಅವರು ಎಲ್ಲವನ್ನೂ ತಂದಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಸುಡ್ತಿದ್ದೆ, ಬಳ್ಳಾರಿಯನ್ನ ಭಸ್ಮ ಮಾಡ್ತೇನೆ ಅನ್ನೋದನ್ನ ಕೇಳಿದ್ರೆ ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂದು ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದರು. 


Ads on article

Advertise in articles 1

advertising articles 2

Advertise under the article