-->
ಪರಶುರಾಮ ಥೀಂ ಪಾರ್ಕ್ ಕಳ್ಳತನ ಸುನಿಲ್ ಕುಮಾರ್ ಸೃಷ್ಟಿಸಿರುವ ಪಿತೂರಿ; ಉದಯಕುಮಾರ್ ಶೆಟ್ಟಿ ಆರೋಪ

ಪರಶುರಾಮ ಥೀಂ ಪಾರ್ಕ್ ಕಳ್ಳತನ ಸುನಿಲ್ ಕುಮಾರ್ ಸೃಷ್ಟಿಸಿರುವ ಪಿತೂರಿ; ಉದಯಕುಮಾರ್ ಶೆಟ್ಟಿ ಆರೋಪ


ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಪರಶುರಾಮ ಥೀಮ್ ಪಾರ್ಕನ್ನು ವಿವಾದಿತ ಕ್ಷೇತ್ರ ಮಾಡಲುಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. 

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. 

ಪರಶುರಾಮ ಥೀಮ್ ಪಾರ್ಕ್ ನ ಆಡಿಟೋರಿಯಂನಲ್ಲಿ ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಕೇವಲ ನಾಲ್ಕು ತಗಡು ಶೀಟ್ ಕಳ್ಳತನ ನಡೆದಿದೆ. ಚಿನ್ನ ಇದ್ದಾಗ ಕಬ್ಬಿಣವನ್ನು ಕಳ್ಳ ತೆಗೆಯುತ್ತಾನೆಯೇ ಎಂದು ಪ್ರಶ್ನಿಸಿದರು. ಕಳ್ಳ ಬೆಲೆಬಾಳುವ ಸೊತ್ತು ಕದಿಯುತ್ತಾನೆ ಅದು ಬಿಟ್ಟು ತಗಡು ಶೀಟ್ ಕದಿಯುತ್ತಾನೆ ಎಂದರೆ ಇದು ಸುನಿಲ್ ಕುಮಾರ್ ಅವರೇ ಮಾಡಿದ ಕುತಂತ್ರ. ಪರಶುರಾಮನ ನಕಲಿ ಪ್ರತಿಮೆ ಬಗ್ಗೆ ನಾವು ಈಗಾಗಲೇ ಕೋರ್ಟ್ ಗೆ ಪಿಎಲ್ ಹಾಕಿದ್ದು, ತನಿಖೆಯ ದಿಕ್ಕು ತಪ್ಪಿಸಲು ಸುನಿಲ್ ಕುಮಾರ್ ಅವರೇ ಸೃಷ್ಟಿಸಿದ ಪಿತೂರಿ ಎಂದು ಆರೋಪಿಸಿದರು. 

ಕಾರ್ಕಳವನ್ನು ವಿವಾದಿತ ಕೇಂದ್ರ ಮಾಡಲು ಪ್ರಯತ್ನಿಸುತ್ತಿರುವ ಸುನಿಲ್ ಕುಮಾರ್ ಅವರ ಮನಸ್ಥಿತಿಯನ್ನು ಕಾರ್ಕಳ ಜನ ಒಪ್ಪುವುದಿಲ್ಲ. ಸುಳ್ಳು ಹೇಳಿಯೇ ಇಲ್ಲಿವರೆಗೆ ಸುನಿಲ್ ಕುಮಾರ್ ಅಧಿಕಾರಕ್ಕೆ ಬಂದಿದ್ದು, 20 ವರ್ಷದಿಂದ ಸುಳ್ಳು ಹೇಳುತ್ತಾ ಬಂದಿದ್ದಾರೆ ಎಂದು ಕಿಡಿ ಕಾರಿದರು. ನಿಷ್ಪ್ರಯೋಜಕ ಕೆಲಸ ಮಾಡಿ ಸುನಿಲ್ ಕುಮಾರ್ ಅವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. 

ತಾಮ್ರದ ತಗಡು ಕಳ್ಳತನವಾಗಿರುವ ಪರಶುರಾಮ ಥೀಮ್ ಪಾರ್ಕಿಗೆ ಸುನಿಲ್ ಕುಮಾರ್ ಅವರು ಎರಡೂವರೆ ವರ್ಷಗಳ ಬಳಿಕ ಭೇಟಿ ನೀಡಿದ್ದು, ಅವರು ಯಾವ ಮುಖ ಹಿಡಿದುಕೊಂಡು ಹೋಗುತ್ತಾರೆ. ಮನುಷ್ಯನಿಗೆ ಮುಖ ಇದ್ದರೆ ತಾನೇ ಹೋಗುವುದು. ಈಗ ಅವರೇ ಕಳ್ಳತನ ಮಾಡಿಸಿ, ಭೇಟಿ ನೀಡುವ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು, 

ಜನವರಿ 11ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸುನಿಲ್ ಕುಮಾರ್ ಅವರು ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಉದಯಕುಮಾರ್ ಶೆಟ್ಟಿ, ಕಸ ಬಂದಿರುವುದು ಸುನಿಲ್ ಕುಮಾರ್ ಅವರಿಂದಲೇ. ಹಾಗಾಗಿ ಪ್ರಾಯಶ್ಚಿತವಾಗಿ ಸ್ವಚಗೊಳಿಸಲಿ ಎಂದರು. ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ನಲ್ಲಿ ಎರಡು ಬಾರಿ ನಡೆದ ಕಳ್ಳತನಕ್ಕೂ ಸುನಿಲ್ ಕುಮಾರ್ ಅವರೇ ಕಾರಣ ಎಂದು ಕಿಡಿಕಾರಿದರು. ಇನ್ನಾದರೂ ಶಾಸಕರು ಬೈಲೂರು ಉಮಿಕಲ್ ಬೆಟ್ಟದ ಮರ್ಯಾದೆ ಉಳಿಸಲಿ. ಆ ಮೂಲಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸಹಕರಿಸಲಿ ಎಂದರು. 


Ads on article

Advertise in articles 1

advertising articles 2

Advertise under the article