ಹಿಮ್ಮುಖ ಚಲಿಸಿದ ಕಾರು; ಬೈಕ್, ರಿಕ್ಷಾಕ್ಕೆ ಡಿಕ್ಕಿ; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ(Video)
Friday, January 02, 2026
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಿಮ್ಮುಖವಾಗಿ ಚಲಿಸಿ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಉಡುಪಿಯ ಜಾಮೀಯಾ ಮಸೀದಿ ರಸ್ತೆಯ ಓಮೇಗಾ ಕುಶನ್ ಬಳಿ ನಡೆದಿದೆ. ಬೈಕ್ ಸವಾರರಾದ ರಿಚರ್ಡ್ ಹಾಗೂ ದೀಪಕ್ ಎಂಬವರಿಗೆ ಗಾಯಗಳಾಗಿವೆ.
2025ರ ಡಿಸೆಂಬರ್ 29ರ ಬೆಳಗ್ಗೆ ಈ ಘಟನೆ ನಡೆದಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಸ್ತೆ ಬದಿ ಪಾರ್ಕ್ ಮಾಡಿದ್ದ ಕಾರನ್ನು ಚಾಲಕ ಎವಿ ಶಾನುಬಾಗ್ ಎಂಬವರು ಚಲಾಯಿಸುವ ವೇಳೆ ಏಕಾಏಕಿ ಕಾರು ಹಿಮ್ಮುಖವಾಗಿ ಚಲಿಸಿದೆ. ಈ ವೇಳೆ ಪಕ್ಕದಲ್ಲಿದ್ದ ಬೈಕ್ ಹಾಗೂ ರಿಕ್ಷಾಗಳಿಗೆ ಡಿಕ್ಕಿಯಾಗಿ ಮುಂದೆ ಚಲಿಸಿದೆ. ಘಟನೆಯಲ್ಲಿ ಬೈಕ್ ಸವಾರ ಹಾಗೂ ರಿಕ್ಷಾ ಚಾಲಕನಿಗೆ ಗಾಯಗಳಾಗಿವೆ. ಅಪಘಾತದ ಭಯಾನಕ ದೃಶ್ಯವು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.